(www.vknews.com) ; ಉಪ್ಪಿನಂಗಡಿಯಿಂದ ಬೆಳ್ತಂಗಡಿ ರಸ್ತೆಯ ಕುಪ್ಪೆಟ್ಟಿಯಿಂದ ಒಂದು ಕಿ.ಮೀಟರ್ ದೂರದ ಜಾರಿಗೆದಡಿ ಎಂಬ ಎಂಬಲ್ಲಿ ವಾಸವಾಗಿರುವ ಒಂದು ಬಡ ಕುಟುಂಬದ ಕಣ್ಣೀರ ಕಥೆಯನ್ನು ತಮ್ಮ ಮುಂದಿಡುತ್ತೇವೆ
ಮಾನ್ಯರೇ; ಒಂದು ವರ್ಷದ ಹಿಂದೆ ಈ ಮೇಲೆ ತಿಳಿಸಿದ ಜಾರಿಗೆದಡಿ ಎಂಬ ಪ್ರದೇಶದಲ್ಲಿ ಯೂಸುಫ್(ಈಚು) ಎಂಬವರು ತನ್ನ ಮಡಡಿ,ತಾಯಿ,ಹಾಗೂ ಎಳೆಯ ಪ್ರಾಯದ ಮಕ್ಕಳೊಂದಿಗೆ ವಾಸಿಸುತ್ತಿದ್ದರು.ಮನೆಯ ಯಜಮಾನ ಯೂಸುಫ್ ಇವರು ತನ್ನ ಕುಟುಂಬದ ಜೀವನ ಮಾರ್ಗಕ್ಕಾಗಿ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದರು.ಕಳೆದ(ಒಂದು ವರ್ಷದ ಹಿಂದೆ) ಈದುಲ್ ಫಿತ್ರ್ ದಿನದ ಮುಂದಿನ ರಾತ್ರಿ ಈದ್ ಹಬ್ಬವನ್ನು ತನ್ನ ಕುಟುಂಬದವರೊಡನೆ ಆಚರಿಸಲು ಕಾರಿನಲ್ಲಿ ಬರುತ್ತಿದ್ದಾಗ ಹಾಸನ ಬಳಿ ಅಚಾನಕಾಗಿ ಅಲ್ಲಾಹನ ವಿಧಿಯೆಂಬಂತೆ ಅಪಘಾತಕ್ಕೀಡಾಗಿ ಒಂದು ವಾರದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದುತ್ತಾರೆ.
ಮರ್ಹೂಂ ಯೂಸುಫ್(ಈಚು) ಇವರ ಮರಣದ ಬಳಿಕ ಅವರ ತಾಯಿ,ಮಡದಿ,ಎಳೆಯ ಪ್ರಾಯದ ಮಕ್ಕಳು ಆಸರೆಯಿಲ್ಲದೆ ಕಂಗಾಲಾಗಿರುತ್ತಾರೆ.ಮರ್ಹೂಂ ಯೂಸುಫ್ ಇವರು ಜೀವಿತಾ ಕಾಲದಲ್ಲಿ ತನ್ನ ಕುಟುಂಬದೊಡನೆ ವಾಸಿಸಲು ಹೊಸ ಮನೆಯೊಂದನ್ನು ಕಟ್ಟುತ್ತಿದ್ದು, ಅದರ ಕೆಲಸ ಪೂರ್ತಿಯಾಗುವುದರೊಳಗೆ ಮನೆಯ ಯಜಮಾನ ಯೂಸುಫ್ ಇವರು ಅಲ್ಲಾಹನ ಅನುಲಂಘನೀಯ ವಿಧಿಗೆ ಶರಣಾದ ಹಿನ್ನಲೆಯಲ್ಲಿ ಮನೆಯ ಕೆಲಸ ಅರ್ಧದಲ್ಲೇ ಕುಂಠಿತಗೊಂಡಿರುತ್ತದೆ. ಇದೀಗ ಮರ್ಹೂಂ ಯೂಸುಫ್ ಅವರ ಮಡದಿ ತನ್ನ ಎಳೆಯ ಪ್ರಾಯದ ಮಕ್ಕಳೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದು, ಮನೆಯ ಬಾಡಿಗೆಯೊಂದಿಗೆ ತನ್ನ ಹಾಗೂ ಮಕ್ಕಳ ಖರ್ಚುಗಳು ನಿಭಾಯಿಸುವುದು ಈ ಬಡ ಸಹೋದರಿಗೆ ಕಷ್ಟಕರವಾಗಿರುವ ಹಿನ್ನಲೆಯಲ್ಲಿ ದಾನಿಗಳ ಸಹಕಾರ ನೆರವು ಅಲ್ಲದೆ ಬೇರೇನೂ ಅವರ ಕಣ್ಣಿಗೆ ಕಾಣಿಸುತ್ತಿಲ್ಲ.
ಆದುದರಿಂದ ಯಾರಾದರೂ ದಾನಿಗಳು ಇದ್ದಲ್ಲಿ ದಯವಿಟ್ಟು ಅರ್ಧದಲ್ಲಿ ನಿಂತಿರುವ ಮನೆಯನ್ನು ಪೂರ್ತಿಗೊಳಿಸಿ ಕೊಡುವ ಮೂಲಕ ಆ ಬಡ ಸಹೋದರಿ ಹಾಗೂ ಎಳೆಯ ಪ್ರಾಯದ ಮಕ್ಕಳ ಕಣ್ಣಿನಲ್ಲಿ ಆಶಾಕಿರಣ ಮೂಡಿಸಬೇಕಾಗಿದೆ.ಯಾರಾದರೂ ಈ ಬಡ ಕುಟುಂಬಕ್ಕೆ ಸಹಾಯ ಮಾಡುವವರು ಇದ್ದರೆ ಖುದ್ದು ಭೇಟಿಯಾಗಿ ಅಥವಾ ಈ ಕೆಳಗೆ ಕಾಣುವ ಅಕೌಂಟ್ ನಂಬರಿಗೆ ತಮ್ಮಿಂದಾಗುವ ಸಹಾಯವನ್ನು ನೀಡಿ ಸಹಕರಿಸಬೇಕಾಗಿ ತಮ್ಮಲ್ಲಿ ಕಳಕಳಿಯ ವಿನಂತಿ
ಇದರ ಬಗ್ಗೆ ಮಾಹಿತಿಯನ್ನು ಸ್ಥಳೀಯ ಜಮಾಅತ್ ಆಡಳಿತ ಸಮಿತಿ ನೇತಾರರು ಅಥವಾ ಪರಿಚಯಸ್ಥರನ್ನು ಸಂಪರ್ಕಿಸಿ ತಿಳಿಯಬಹುದಾಗಿದೆ
ಮಾಹಿತಿಗಾಗಿ: 9686718406 7619241365
ಅವರ ಅಕೌಂಟ್ ನಂಬರ್
Name; Hajira w/o isubu Jarigedadi House, Kalleri Post,Uruvalu Village D.K Account number: 20332973111 IFSC: SBIN0014505 Branch: Uppinangady
ಅಲ್ಲಾಹು ತಮ್ಮ ದಾನ ಧರ್ಮವನ್ನು ಸ್ವೀಕರಿಸಲಿ,ತಕ್ಕುದಾದ ಪ್ರತಿಫಲವನ್ನು ನೀಡಿ ಅನುಗ್ರಹಿಸಲಿ-ಆಮೀನ್ ಯಾ ರಬ್ಬಲ್ ಆಲಮೀನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.