“ಹದೀಸ್ ದರ್ಶನ” : ಭಾಗ – 6

(ವಿಶ್ವ ಕನ್ನಡಿಗ ನ್ಯೂಸ್) : ಮಾರಕವಾದ ಕೊರೋನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಸಿಕ್ಕಿದ ಸಮಯವನ್ನು ಪೋಲು ಮಾಡದೇ, ಪ್ರೊ. ಎಂ. ಅಬೂಬಕರ್ ತುಂಬೆ ಅವರು ಹಲವಾರು ಪ್ರಮುಖ ಹದೀಸ್ ಗಳನ್ನು ಕನ್ನಡಕ್ಕೆ ಅನುವಾದ ಮಾಡಿರುತ್ತಾರೆ.

ಹದೀಸ್ ಗಳ ಕನ್ನಡ ಅನುವಾದಗಳನ್ನು ವಿಶ್ವ ಕನ್ನಡಿಗ ನ್ಯೂಸ್ ತಮ್ಮ ಓದುಗರಿಗಾಗಿ “ಹದೀಸ್ ದರ್ಶನ” ಎಂಬ ತಲೆಬರಹದಲ್ಲಿ “ಪ್ರತಿ ಬುಧವಾರ” ಪ್ರಕಟಿಸುತ್ತಿದೆ… ತಪ್ಪದೆ ಓದಿ…

حَدَّثَنَا أَبُوبَكْرِبْنُأَبِيشَيْبَةَ،حَدَّثَنَامُحَمَّدُبْنُفُضَيْلٍ، عَنْأَبِيمَالِكٍالأَشْجَعِيِّ،عَنْرِبْعِيٍّ،عَنْحُذَيْفَةَ،قَالَ قَالَرَسُولُاللَّهِصلىاللهعليهوسلم‏”‏فُضِّلْنَاعَلَىالنَّاسِ بِثَلاَثٍجُعِلَتْصُفُوفُنَاكَصُفُوفِالْمَلاَئِكَةِوَجُعِلَتْلَنَا الأَرْضُكُلُّهَامَسْجِدًاوَجُعِلَتْتُرْبَتُهَالَنَاطَهُورًاإِذَا لَمْنَجِدِالْمَاءَ‏.

11.ಹುಧೈಫಾ (ರ) ಯವರಿಂದ ವರದಿ: ಅಲ್ಲಾಹುವಿನ ಪ್ರವಾದಿ (ಸ) ಹೇಳಿದರು: ನಮ್ಮನ್ನು (ಇತರ) ಜನರಿಗಿಂತ ಮೂರು (ವಿಷಯಗಳಲ್ಲಿ) ಶ್ರೇಷ್ಠರನ್ನಾಗಿ ಮಾಡಲಾಗಿದೆ: ನಮ್ಮ ಸಾಲುಗಳನ್ನು ದೇವದೂತರ ಸಾಲುಗಳಂತೆ ಮಾಡಲಾಗಿದೆ ಮತ್ತು ಇಡೀ ಭೂಮಿಯನ್ನು ನಮಗೆ ಮಸೀದಿಯನ್ನಾಗಿ ಮಾಡಲಾಗಿದೆ, ಮತ್ತು ನೀರು ಲಭ್ಯವಿಲ್ಲದಿದ್ದಲ್ಲಿ ಅದರ ಧೂಳನ್ನು/ಮಣ್ಣನ್ನು ನಮಗೆ ಶುದ್ಧೀಕರಿಸಲು ಅನುಮತಿಸಲಾಗಿದೆ. VKN/SM/5/5

 

 

وَحَدَّثَنَا يَحْيَىبْنُأَيُّوبَ،وَقُتَيْبَةُبْنُسَعِيدٍ،وَعَلِيُّبْنُ حُجْرٍ،قَالُواحَدَّثَنَاإِسْمَاعِيلُ، – وَهُوَابْنُجَعْفَرٍ – عَنِ الْعَلاَءِ،عَنْأَبِيهِ،عَنْأَبِيهُرَيْرَةَ،أَنَّرَسُولَاللَّهِ صلىاللهعليهوسلمقَالَ‏”‏فُضِّلْتُعَلَى الأَنْبِيَاءِبِسِتٍّأُعْطِيتُجَوَامِعَالْكَلِمِوَنُصِرْتُ بِالرُّعْبِوَأُحِلَّتْلِيَالْغَنَائِمُوَجُعِلَتْلِيَالأَرْضُ طَهُورًاوَمَسْجِدًاوَأُرْسِلْتُإِلَىالْخَلْقِكَافَّةًوَخُتِمَبِيَ النَّبِيُّونَ‏

12.ಅಬೂ ಹುರೈರಾ(ರ) ವರದಿ: ಅಲ್ಲಾಹುವಿನ ಪ್ರವಾದಿಯವರು ಹೇಳಿದರು, ಇತರ ಪ್ರವಾದಿಗಳಿಗಿಂತ ನನಗೆ ಆರು ವಿಷಯಗಳಲ್ಲಿ ಶ್ರೇಷ್ಠತೆಯನ್ನು ನೀಡಲಾಗಿದೆ: ನನಗೆ ಸಂಕ್ಷಿಪ್ತ ಆದರೆ ಅರ್ಥದಲ್ಲಿ ಸಮಗ್ರವಾದ ಪದಗಳನ್ನು ನೀಡಲಾಗಿದೆ; ನನಗೆ ಶತ್ರುಗಳಿಂದ ಹಾಗೂ ಅವರ ಭಯೋತ್ಪಾದನೆಯಿಂದ ರಕ್ಷಣೆ ನೀಡಲಾಗಿದೆ : ಯುದ್ಧಾಸ್ತಿಯು ನನಗೆ ಕಾನೂನುಬದ್ಧಗೊಳಿಸಲಾಗಿದೆ: ಭೂಮಿಯನ್ನು ನನಗೆ ಸ್ವಚ್ಛ, ಚೊಕ್ಕಟ ಸ್ಥಳ ಹಾಗೂ ಆರಾಧನಾ ಸ್ಥಳವನ್ನಾಗಿ ಮಾಡಿದೆ.; ನನ್ನನ್ನು ಎಲ್ಲಾ ಮಾನವಕುಲಕ್ಕೂ ನಿಯೋಗಿಸಲಾಗಿದೆ ಮತ್ತು ಪ್ರವಾದಿಗಳ ಸಾಲು ನನ್ನ ಆಗಮನೊಂದಿಗೆ ಮುಚ್ಚಲ್ಪಟ್ಟಿದೆ.
ಯಾವುದೇ ಪ್ರವಾದಿಗಳಿಗೆ ನೀಡದ ಪ್ರತ್ಯೇಕ ಪದವಿ ಪ್ರದಾನ ಮಾಡಿ ಅಲ್ಲಾಹು ಅಂತಿಮ ಪ್ರವಾದಿಯಾಗಿರುವ ಹಜ್ರತ್ ಮುಹಮ್ಮದ್ ಮುಸ್ತಫಾ (ಸ.ಅ) ರವರನ್ನು ನಿಯೋಗಿಸಿದ್ದಾನೆ.

ಕನ್ನಡಕ್ಕೆ ಅನುವಾದ : ಪ್ರೊ. ಎಂ. ಅಬೂಬಕರ್ ತುಂಬೆ

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...