ಬಂಗ್ಲಗುಡ್ಡೆ ಗುಡ್ಡ ಕುಸಿದ ಸ್ಥಳಕ್ಕೆ ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ ಬೇಟಿ

ಮಂಗಳೂರು(www.vknews.in): ನಗರದ ಹೊರವಲಯದ ಗುರುಪುರ ಬಂಗ್ಲೆಗುಡ್ಡೆ ಎಂಬಲ್ಲಿ ಭಾನುವಾರ ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳ ಮೃತಪಟ್ಟಿದ್ದು ಸುಮಾರು 7 ಮನೆಗಳಿಗೆ ಹಾನಿಯಾಗಿದ್ದು ಇಂದು ಈ ಸ್ಥಳಕ್ಕೆ SDPI ರಾಜ್ಯಾದ್ಯಕ್ಷ ಇಲ್ಯಾಸ್ ಮೊಹಮ್ಮದ್ ತುಂಬೆ ಬೇಟಿ ಸಂತ್ರಸ್ತರಿಗೆ ಸಾಂತ್ವನ ಹೇಳಿ, ನಿಮಗೆ ನ್ಯಾಯಬಧ್ದವಾಗಿ ದೊರಕಬೇಕಾದ ಪರಿಹಾರ ಕಾರ್ಯಕ್ಕೆ SDPI ಸಹಕರಿಸಲಿದೆ ಎಂಬ ಮಾತನ್ನಾಡಿದರು.

ಈ ಸಂಧರ್ಭದಲ್ಲಿ Sdpi ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹುಲ್ ಎಸ್.ಎಚ್.ಜಿಲ್ಲಾ ಸಮಿತಿ ಸದಸ್ಯ ಇಕ್ಬಾಲ್ IMR,

ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ನಾಸಿರ್ ಉಳಾಯಿಬೆಟ್ಟು,ಜೊತೆ ಕಾರ್ಯದರ್ಶಿ ಉಸ್ಮಾನ್ ಗುರುಪುರ, ವಾಮಂಜೂರು ವಲಯ ಅಧ್ಯಕ್ಷ ರಝಾಕ್

ಗುರುಪುರ ಕೈಕಂಬ ವಲಯ ಸಮಿತಿ ಅಧ್ಯಕ್ಷ ಝಾಕಿರ್ ಮಳಲಿ, ಕಾರ್ಯದರ್ಶಿ ಸಾಹಿಕ್ ಅಡ್ಡೂರು ಗ್ರಾಮ ಸಮಿತಿ ಅಧ್ಯಕ್ಷ ಎ.ಕೆ.ಮುಸ್ತಫಾ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...