ವಿದ್ಯುತ್ ಬಿಲ್ ಪಾವತಿ ಗೆ ಸರ್ಕಾರ ಸಬ್ಸಿಡಿ ನೀಡಬೇಕು: ವೆಲ್ಫೇರ್ ಪಾರ್ಟಿ ಆಗ್ರಹ

ಬೆಂಗಳೂರು (www.vknews.com) : ಲಾಕ್‌ಡೌನ್ ಸಂದರ್ಭ ಮೂರು ತಿಂಗಳ ಬಿಲ್ ಕಟ್ಟಲು ರಾಜ್ಯ ಸರ್ಕಾರ ಕಾಲವಕಾಶ ನೀಡಿತ್ತು. ಲಾಕ್‌ಡೌನ್ ಸಡಿಲಿಕೆ ನಂತರ ಏಕಾಏಕಿ 4 ಪಟ್ಟು ವಿದ್ಯುತ್ ಬಿಲ್ ಹೆಚ್ಚಳವಾಗಿದೆ. ಅವೈಜ್ಞಾನಿಕವಾಗಿ ಬಿಲ್ ದರವನ್ನು ಹೆಚ್ಚಳ ಮಾಡಲಾಗಿದೆ. ಲಾಕ್‌ಡೌನ್‌ನಿಂದ ದುಡಿಮೆಯೇ ಇಲ್ಲದೆ ಜನರು ಕಂಗಾಲಾಗಿರುವಾಗ ಸರಕಾರ ಕನಿಷ್ಠ ಪಕ್ಷ ಬಿಲ್ ಪಾವತಿಗೆ ಕೇರಳ ಸರ್ಕಾರದ ಮಾದರಿಯಲ್ಲಿ ಸಬ್ಸಿಡಿ ಕೊಡಬೇಕೆಂದು ವೆಲ್ಫೇರ್ ಪಾರ್ಟಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇಂಜಿನಿಯರ್ ಹಬೀಬುಲ್ಲಾ ಖಾನ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕೋವಿಡ್ 19 ಸೋಂಕು ಮತ್ತು ಲಾಕ್ಡೌನ್ ನಿಂದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿ ದಾರೆ, ಇಂತಹ ಸಂದರ್ಭ ದಲ್ಲಿ ಸರ್ಕಾರ ಸಂಕಷ್ಟ ದಲ್ಲಿ ಇರುವ ಜನರಿಗೆ ಅನುಕೂಲವಾಗುವ ಬದಲು ಇನ್ನೆಷ್ಟು ಬರೆ ಎಳಿಯುವ ಕೆಲ್ಸ ಮಾಡತಿದ್ದೆ ಯಂದು ಅವರು ಆರೋಪಿಸಿದರು. ಸರ್ಕರ ಈ ಕೂಡಲೇ ವಿಧ್ಯುತ್ ಬಿಲ್ ಗೆ ಸಬ್ಸಿಡಿ ಘೋಷಿಸ ಬೇಕು ಎಂದು ಅವರು ಸರ್ಕಾರ ಕೆ ಒತ್ತಾಯಿಸಿದ್ದಾರೆ.

ಇದೆ ವೇಳೆ ಮಾತನಾಡಿದ ಅವರು ಕೋವಿಡ್ 19 ಸೋಂಕು ನಿಂದ ರಾಜ್ಯವನ್ನು ಸಂಪೂರ್ಣ ತಲ್ಲಣಗೊಳಿಸಿದೆ.

ಜನರ ಜೀವನ ಉಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯ ಸರ್ಕಾರ ನಿರ್ಲಕ್ಷತನವನ್ನು ತೋರಿಸುತ್ತಿದೆ. ಜನರ ಸಮಸ್ಯೆಗೆ ಗಮನವನ್ನೇ ಹರಿಸುತ್ತಿಲ್ಲಮುಂದೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ. ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎಂದು ಹೇಳುತ್ತಿದ್ದಾರೆ. ಮನೆಯಲ್ಲೇ ಕ್ವಾರಂಟೈನ್ ಆಗಿ ಎನ್ನುತ್ತಾರೆ.ಹಾಸ್ಟಲ್, ಹೊಟೇಲ್ ವಶಕ್ಕೆ ತೆಗೆದುಕೊಳ್ಳುವಂತೆ ಹೇಳಿದ್ದೆವು. ಆದರೆ ಇಂದಿಗೂ ಏನೂ ಆಗಿಲ್ಲ ಎಂದರು.ಬೀದಿ ಬೀದಿಗಳಲ್ಲಿ ಜನ ಸಾಯುವ ಪರಿಸ್ಥಿತಿ ಎದುರಾಗಲಿದೆ. ಆ್ಯಂಬುಲೆನ್ಸ್, ಮೆಡಿಕಲ್ ಸಿಬ್ಬಂದಿಗಳ ಕೊರೆತಯಾಗಿದೆ. ಸರ್ಕಾರ ಸ್ಪೆಷಲ್ ರಿಕ್ರ್ಯೂಟ್ ಮೆಂಟ್ ಪ್ರಾರಂಭಿಸಲಿ. ನರ್ಸ್, ವೈದ್ಯರು, ಪೌರ ಕಾರ್ಮಿಕರನ್ನು ತೆಗೆದುಕೊಳ್ಳಲಿ. ಅಗತ್ಯವಾದಷ್ಟು ಸಿಬ್ಬಂದಿಯನ್ನು ತುರ್ತಾಗಿ ತೆಗೆದುಕೊಳ್ಳಿ ಎಂದು ಹಬೀಬುಲ್ಲಾ ಖಾನ್ ಒತ್ತಾಯಿಸಿದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...