ದಕ್ಷಿಣ ಕನ್ನಡ ಜಿಲ್ಲಾ ಸುದ್ದಿಗಳು

ಬಿ.ಐ.ಆರ್.ಡಿಜಂಟಿ ನಿರ್ದೇಶಕರಾಗಿಅರುಣ್ ಎಂ ತಲ್ಲೂರು ನೇಮಕ

 

ಮಂಗಳೂರು (www.vknews.com) : ಮಂಗಳೂರಿನ ಬ್ಯಾಂಕರ್ಸ್‍ಇನ್ಸಿಟ್ಯೂಟ್‍ಆಫ್‍ರೂರಲ್‍ಡೆವಲಪ್‍ಮೆಂಟ್ (ಬಿಐಆರ್‍ಡಿ)ನ ಜಂಟಿ ನಿರ್ದೇಶಕರಾಗಿ):-ನಬಾರ್ಡ್‍ನಜನರಲ್ ಮ್ಯಾನೇಜರ್‍ಅರುಣ್ ಎಂ ತಲ್ಲೂರುಅವರುಸೋಮವಾರಅಧಿಕಾರ ಸ್ವೀಕರಿಸಿದ್ದಾರೆ.

ನಬಾರ್ಡ್ ವಿವಿಧ ಆಡಳಿತ ವಿಭಾಗಗಳಲ್ಲಿ ಹಲವು ವರ್ಷ ಸೇವೆ ಸಲ್ಲಿಸಿರುವ ಅರುಣ್‍ತಲ್ಲೂರು, ನವದೆಹಲಿ ನ್ಯಾಬ್ಕೋನ್ಸ್‍ಇದರಉಪಾಧ್ಯಕ್ಷರಾಗಿದ್ದಾರೆ.ಬಿಐಆರ್‍ಡಿ ಮಂಗಳೂರು ಘಟಕವು ನಬಾರ್ಡ್ ಪ್ರಾಯೋಜಿತ ಸಂಸ್ಥೆಯಾಗಿದ್ದು, ಗ್ರಾಮೀಣ ಹಣಕಾಸು ಸಂಸ್ಥೆಗಳನ್ನು ಸ್ಪರ್ಧಾತ್ಮಕತೆಗೆ ಸಜ್ಜುಗೊಳಿಸಿ, ಗ್ರಾಹಕರ ಅಪೇಕ್ಷೆಗೆ ತಕ್ಕಂತೆಕಾರ್ಯನಿರ್ವಹಿಸಲು ಒತ್ತುಕೊಡುತ್ತದೆ. ಮಂಗಳೂರಿನ ನಗರದ ಬೊಂದೆಲ್‍ನಲ್ಲಿಕಾರ್ಯಾಚರಿಸುತ್ತಿರುವಬಿಐಆರ್‍ಡಿ, ಬ್ಯಾಂಕಿಂಗ್‍ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ತರಬೇತಿಗಳನ್ನು ನಡೆಸುತ್ತಿದೆ. 2019-20ರಲ್ಲಿ ಈ ಸಂಸ್ತೆಯಲ್ಲಿ ಸುಮಾರು 130 ತರಬೇತಿ ಆಯೋಜಿಸಿದೆ ಎಂದು ಪ್ರಕಟಣೆ ತಿಳಿಸಿದೆ.

 

ಸಾರ್ವಜನಿಕರಿಗಾಗಿ ಸೇವಾ ಸಿಂಧು ಆನ್‍ಲೈನ್ ಸೇವೆ

ರಾಷ್ಟ್ರೀಯ ಇ-ಆಡಳಿತ ಹಾಗೂ ಇಡಿಸಿಎಸ್ ನಿರ್ದೇಶನಾಲಯದ ನಿರ್ದೇಶನದಂತೆಇ-ಜಿಲ್ಲಾಯೋಜನೆಯ ಸೇವಾ ಸಿಂಧು ಅಂತರ್ಜಾಲ ತಾಣವನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ವಿವಿಧ ಇಲಾಖೆಗಳ 451 ಸೇವೆಗಳು ಲಭ್ಯವಿರುತ್ತದೆ. ದಕ್ಷಿಣಕನ್ನಡಜಿಲ್ಲೆಯಲ್ಲಿ 240 ಸಿ.ಎಸ್.ಸಿ. ಕೇಂದ್ರಗಳಿವೆ. ಕೊರೊನಾಅವಧಿಯಲ್ಲಿ ಸಾರ್ವಜನಿಕರು ನೇರವಾಗಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಬದಲು ಸೇವಾ ಸಿಂಧು ಆನ್ ಲೈನ್ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.

ಸಾರ್ವಜನಿಕರು ಸರ್ಕಾರದ ಸೇವೆಗಳನ್ನು ಸೇವಾಸಿಂಧು ವೆಬ್ ಸೈಟ್ ಮೂಲಕ ಅಥವಾ ಸಮೀಪದ ಸಿ.ಎಸ್.ಸಿ. ಕೇಂದ್ರಗಳಲ್ಲಿ ಸಹ ಪಡೆದುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಸಕಾಲ ಯೋಜನೆಯಡಿ ಬರುವಎಲ್ಲಾ ಸೇವೆಗಳು ಸೇವಾಸಿಂಧು ಅಡಿ ಲಭ್ಯವಾಗಲಿದೆ.ಸಾರ್ವಜನಿಕರು ಸಲ್ಲಿಸಿದ ಅರ್ಜಿಯ ಸ್ಥಿತಿಗತಿಗಳನ್ನು ತಿತಿತಿ.sಚಿಞಚಿಟಚಿ.ಞಚಿಡಿ.ಟಿiಛಿ.iಟಿ ವೆಬ್ ಸೈಟ್ ಮೂಲಕ ಪರಿಶೀಲಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.

 

ಅಂಗನವಾಡಿ ಸಹಾಯಕಿ ಹುದ್ದೆ -ಅರ್ಜಿಆಹ್ವಾನ

ಮಂಗಳೂರು ಜುಲೈ 06 (ಕರ್ನಾಟಕ ವಾರ್ತೆ):-ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 2ಅಂಗನವಾಡಿ ಕಾರ್ಯಕರ್ತೆ ಮತ್ತು 13 ಅಂಗನವಾಡಿಸಹಾಯಕಿಯರಗೌರವ ಸೇವೆಯಹುದ್ದೆಗಳನ್ನು ಭರ್ತಿ ಮಾಡಲುವೆಬ್‍ಸೈಟ್ ವಿಳಾಸ http://www.anganwadirecruit.kar.nic.in ರಲ್ಲಿಜುಲೈ1 ರಿಂದಅರ್ಜಿ ಆಹ್ವಾನಿಸಿದೆ.ಜುಲೈ30ಆನ್‍ಲೈನ್‍ನಲ್ಲಿಅರ್ಜಿ ಸಲ್ಲಿಸಲುಕೊನೆಯ ದಿನವಾಗಿರುತ್ತದೆ.

ಕಾರ್ಯಕರ್ತೆ ಹುದ್ದೆಖಾಲಿಯಿರುವಅಂಗನವಾಡಿಕೇಂದ್ರದವಿವರಇಂತಿವೆ:- 1) ಬಜ್ಪೆಗ್ರಾಮ ಪಂಚಾಯತ್, ಸ್ವಾಮಿಲ ಪದವುಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ, 2) ಮೂಡಬಿದ್ರೆ ವಾ,ನಂ-06 ಗ್ರಾಮ ಪಂಚಾಯತ್‍ಜೈನ್ ಪೇಟೆಅಂಗನವಾಡಿಕೇಂದ್ರ -ಸಾಮಾನ್ಯ ವರ್ಗ.

ಸಹಾಯಕಿ ಹುದ್ದೆಖಾಲಿಯಿರುವಅಂಗನವಾಡಿಕೇಂದ್ರದ ವಿವರಇಂತಿವೆ:-1.ಕೋಟೆಕಾರ್ ಪಟ್ಟಣ ಪಂಚಾಯತ್ ವಾ.ನಂ-5 ರ ಬಗಂಬಿಲ ಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ, 2. ಕೋಟೆಕಾರ್ ಪಟ್ಟಣ ಪಂಚಾಯತ್ ವಾ.ನಂ-11ರ ಪಾನೀರುಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ, 3. ಕುಪ್ಪೆಪದವುಗ್ರಾಮ ಪಂಚಾಯತ್‍ಕಲ್ಲಾಡಿಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ, 4.ಪೆರ್ಮುದೆಗ್ರಾಮ ಪಂಚಾಯತ್ ಪಡುಪದವುಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ, 5.ಮೂಡಬಿದ್ರೆ ಪುರಸಭೆ ವಾ.ನಂ-10ರಜ್ಯೋತಿನಗರಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ, 6.ಮೂಡಬಿದ್ರೆ ಪುರಸಭೆ ವಾ.ನಂ-12 ರ ನೀರಳಿಕೆ ಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ, 7.ಮೂಡಬಿದ್ರೆ ಪುರಸಭೆ ವಾ.ನಂ-6ರಜೈನ್ ಪೇಟೆಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ, 8. ಮಂಜನಾಡಿಗ್ರಾಮ ಪಂಚಾಯತ್ ಉರುಮಣೆ-2 ರಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ, 9.ಉಳ್ಳಾಲ ನಗರಸಭೆ ವಾ.ನಂ-15 ರ ಉಳ್ಳಾಲಬೈಲ್-2 ಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ, 10. ನೀರುಮಾರ್ಗಗ್ರಾಮ ಪಂಚಾಯತ್ ಬಿತ್ತುಪಾದೆಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ, 11.ಬೆಳುವಾಯಿ ಗ್ರಾಮ ಪಂಚಾಯತ್ ಬೆಳುವಾಯಿ ಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ, 12.ಮುಲ್ಕಿ ನಗರಪಂಚಾಯತ್ ವಾ.ನಂ-18 ರಚಿತ್ರಾಪುಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ, 13. ಮುಲ್ಕಿ ನಗರ ಪಂಚಾಯತ್ ವಾ.ನಂ-10ರ ಲಿಂಗಪ್ಪಯ್ಯಕಾಡು-3 ಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿಯೋಜನೆ, ಮಂಗಳೂರು ಗ್ರಾಮಾಂತರ, ಸ್ವೀಕಾರ ಕೇಂದ್ರಕಟ್ಟಡ, ವಾಮಂಜೂರು-575028 ದೂರವಾಣಿ ಸಂಖ್ಯೆ:-0824-2263199 ನ್ನು ಸಂಪರ್ಕಿಸಲುಮಂಗಳೂರು ಗ್ರಾಮಾಂತರಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

 

ಅಪರಿಚಿತ ಶವ ಪತ್ತೆ 

ಅಪರಿಚಿತ ಗಂಡಸಿನ ಮೃತದೇಹವುಜುಲೈ 05ರಂದುಸುರತ್ಕಲ್‍ನ ಸರ್ವೀಸ್ ಸ್ಟ್ಯಾಂಡ್ ಒಳಗಡೆ ಪತ್ತೆಯಾಗಿದ್ದು, ಸುರತ್ಕಲ್ ಪೊಲೀಸ್‍ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ಮೃತ ವ್ಯಕ್ತಿಯಚಹರೆಇಂತಿವೆ : ವಯಸ್ಸು: 35-40 ವರ್ಷ, ಎಣ್ಣೆಕಪ್ಪು ಮೈ ಬಣ್ಣ, ಸಾಧಾರಣ ಸಪೂರದೇಹ, ಕಪ್ಪುಉದ್ದನೆಯತಲೆಕೂದಲು ಮತ್ತುದಪ್ಪ ಮೀಸೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸುರತ್ಕಲ್ ಪೆÇಲೀಸ್‍ಠಾಣೆದೂರವಾಣಿ ಸಂಖ್ಯೆ:-0824-2290533, 9480805359 ಅಥವಾ ನಗರಕಂಟ್ರೋಲ್‍ರೂಮ್‍ದೂರವಾಣಿ ಸಂಖ್ಯೆ:- 0824-2220800 ಸಂಪರ್ಕಿಸಲು ಸುರತ್ಕಲ್ ಪೊಲೀಸ್‍ಠಾಣೆ, ಪೊಲೀಸ್ ಉಪ ನಿರೀಕ್ಷಕರುಪ್ರಕಟಣೆ ತಿಳಿಸಿದೆ.

 

ಸರ್ಕಾರಿ ನೌಕರರಿಗೆಕೆ.ಜಿ.ಐ.ಡಿ.ಬೋನಸ್

ಕರ್ನಾಟಕರಾಜ್ಯ ಸರಕಾರಿ ನೌಕರರ ಸಂಘ ಮನವಿ ಮೇರೆಗೆ ಮುಖ್ಯಮಂತ್ರಿಗಳು ರಾಜ್ಯದಲ್ಲಿಕೋವಿಡ್– 19 ಸಂದಿಗ್ದ ಪರಿಸ್ಥಿತಿಯಲ್ಲೂ ರಾಜ್ಯ ಸರ್ಕಾರಿ ನೌಕರರಆರ್ಥಿಕ ಪರಿಸ್ಥಿತಿಯನ್ನು ಮನಗಂಡು, 2014 ರಿಂದ 2016 ಕ್ಕೆ ಅಂತ್ಯಗೊಂಡದ್ವೈವಾರ್ಷಿಕಅವಧಿಗೆರಾಜ್ಯ ಸರ್ಕಾರಿ ನೌಕರರಕೆ.ಜಿ.ಐ.ಡಿ. ವಿಮಾ ಪಾಲಿಸಿಗಳ ಮೇಲೆ ಪತ್ರಿರೂ 1000 ಗಳಿಗೆ ವಾರ್ಷಿಕರೂ.85 ಬೋನಸ್ ಮಂಜೂರು ಮಾಡಿರುತ್ತಾರೆ.

ಸರ್ಕಾರಿ ನೌಕರರ ಬೇಡಿಕೆಯನ್ನುಈಡೇರಿಸಿದ್ದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕರ್ನಾಟಕರಾಜ್ಯ ಸರಕಾರಿ ನೌಕರ ಸಂಘದರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಕೇಂದ್ರ ಸಂಘದ ಪದಾಧಿಕಾರಿಗಳಿಗೆ ದಕ್ಷಿಣಕನ್ನಡಜಿಲ್ಲಾ ಸರಕಾರಿ ನೌಕರರ ಪರವಾಗಿಸಂಘದಜಿಲ್ಲಾಧ್ಯಕ್ಷ ಪಿ.ಕೆ.ಕೃಷ್ಣ ಕೃತಜ್ಞತೆ ಸಲ್ಲಿಸಿದ್ದಾರೆ.

 

ಪ್ರಧಾನ ಮಂತ್ರಿ ಮತ್ಸ್ಯ ಸಂಪದಯೋಜನೆಯಡಿಕಾರ್ಯಕ್ರಮರೂಪಿಸುವಂತೆ ಕರೆ

ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕೆಯ ವಿವಿಧರೀತಿಯಅಭಿವೃದ್ಧಿ ಆಯಾಮಗಳ ಬಗ್ಗೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಕಾರ್ಯಕ್ರಮ ರೂಪಿಸುವಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಅಧ್ಯಕ್ಷ ಮಟ್ಟಾರ್‍ರತ್ನಾಕರ್ ಹೆಗ್ಡೆ ಇವರು ಅಧಿಕಾರಿಗಳಿಗೆ ಕರೆ ನೀಡಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸುಸ್ಥಿರ ಅಭಿವೃದ್ಧಿ ಗುರಿಗಳು 14 ಮತ್ತು 15ರಡಿಯಲ್ಲಿಯೋಜನೆಗಳನ್ನು ರೂಪಿಸುವ ಬಗ್ಗೆ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಗಳೊಡನೆ ಮಾತನಾಡುತ್ತಾ, ಮೀನುಗಾರಿಕಾ ಬಂದರಿನಲ್ಲಿ ಮೂಲ ಸೌಲಭ್ಯಕಲ್ಪಿಸುವುದು, ಮೀನು ಉತ್ಪನ್ನ ಜಾಸ್ತಿಗೊಳಿಸುವ ಕುರಿತು ಒಳನಾಡು ಮೀನುಗಾರಿಕೆ ಕೈಗೊಳ್ಳವುದು, ಸಮುದ್ರ ಉತ್ಪನ್ನಗಳ ರಪ್ತು ದ್ವಿಗುಣಗೊಳಿಸುವುದು, ಪುಡ್ ಪಾರ್ಕ್‍ಗಳು, ಆಹಾರ ಭದ್ರತೆ ಮತ್ತುಆಧುನಿಕ ಮೂಲ ಸೌಕರ್ಯಒದಗಣೆ ಹಾಗೂ ಕಡಲತೀರದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಚರ್ಚಿಸಿದರು.

ಜೊತೆಗೆತಲಪಾಡಿಯಿಂದಉತ್ತರಕನ್ನಡಜಿಲ್ಲೆಯ ಮಾಜಾಳಿವರೆಗಿನ ಮೀನುಗಾರಿಕಾರಸ್ತೆಯನ್ನುಅಭಿವೃದ್ಧಿಪಡಿಸುವಕುರಿತು ಈಗಾಗಲೇ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸದ್ರಿರಸ್ತೆಯಅಭಿವೃದ್ಧಿಯಿಂದ ಮೀನುಗಾರ ಕುಟುಂಬಗಳಿಗೆ ಅನುಕೂಲವಾಗಲಿದೆಎಂದುಅಭಿಪ್ರಾಯಪಟ್ಟರು.

ಸಭೆಯಲ್ಲಿದ.ಕ.ಮತ್ತುಉಡುಪಿ ಜಿಲ್ಲಾಮೀನು ಮಾರಾಟ ಫೆಡರೇಷನ್‍ಅಧ್ಯಕ್ಷಯಶ್‍ಪಾಲ್ ಸುವರ್ಣ, ಮೀನುಗಾರಿಕಾ ವಿಶ್ವವಿದ್ಯಾಲಯದಡೀನ್‍ಡಾ.ಎ. ಸೆಂಥಿಲ್‍ವೇಲ್, ಮೀನುಗಾರಿಕಾಉಪನಿರ್ದೇಶಕ ಪಾಶ್ವನಾಥ್, ಪ್ರವಾಸೋದ್ಯಮಇಲಾಖೆಯ ಸಹಾಯಕ ನಿರ್ದೇಶಕಡಾ.ಉದಯ ಶೆಟ್ಟಿ, ಮಂಗಳೂರು ಬಂದರು ಮತ್ತು ಮೀನುಗಾರಿಕಾಇಲಾಖೆಯ ಅಧಿಕಾರಿಗಳು, ಮೀನುಗಾರಿಕಾಅಭಿವೃದ್ಧಿ ನಿಗಮ ಅಧಿಕಾರಿಗಳು ಮತ್ತಿತರರುಉಪಸ್ಥಿತರಿದ್ಧರು.ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿ ಸೋಜಕಾರ್ಯಕ್ರಮವನ್ನು ಸ್ವಾಗತಿಸಿದರು.

 

ಎಕ್ಕಾರುಗ್ರಾಮದಲ್ಲಿರೈತರೊಂದಿಗೆ ಸಮಾಲೋಚನೆ

ಭತ್ತದ ಬೆಳೆ ಕಡೆಮೆಆಗುತ್ತಿರುವ ಈ ಅವಧಿಯಲ್ಲಿದಕ್ಷಿಣಕನ್ನಡಜಿಲ್ಲೆಯ ಮಂಗಳೂರು ತಾಲೂಕಿನಲ್ಲಿಒಂದು ಹೊಸ ಪ್ರಯತ್ನವನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಮಂಗಳೂರು ತಾಲೂಕಿನಲ್ಲಿಒಟ್ಟು ಭತ್ತ ಬೆಳೆಯುವ ಕ್ಷೇತ್ರ 10,000 ಹೆಕ್ಟೇರ್‍ಇದ್ದು, ಈಗ ಕೇವಲ 4600 ಹೆಕ್ಟೇರ್‍ಗಳಲ್ಲಿ ಬೆಳೆಯಲಾಗುತ್ತಿದೆ.

ದಕ್ಷಿಣಕನ್ನಡಜಿಲ್ಲಿಯಲ್ಲಿರೈತರು ಭತ್ತದ ಬೆಳೆ ಲಾಭದಾಯಕವಲ್ಲ ಹಾಗೂ ಕೂಲಿ ಆಳುಗಳ ಸಮಸ್ಯೆಯಿಂದಅಡಿಕೆ ಹಾಗೂ ತೆಂಗು ಬೆಳೆಗಳಿಗೆ ಮೊರೆ ಹೋಗುತ್ತಿದ್ದಾರೆ, ಆದರೆರೈತರು ಭತ್ತ ಬೆಳೆಯದಿದ್ದರೆ ಜನರ ಹಸಿವನ್ನು ನಿವಾರಿಸುವವರುಯಾರು? ಆದುದರಿಂದ ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು 100 ಎಕರೆ ಪಾಳು ಬಿಟ್ಟ ಜಮೀನುಗಳನ್ನು ಗುರುತಿಸಿ, ರೈತರ ಗುಂಪುಗಳ ಸಹಾಯದಿಂದ ಭತ್ತ ಬೆಳೆಯುವ ಕ್ಷೇತ್ರವನ್ನು ಹೆಚ್ಚಿಸುವ ಪ್ರಯತ್ನದಲ್ಲಿತೊಡಗಿದೆ.ಈಗಾಗಲೆ ಸುರತ್ಕಲ್ ಹೋಬಳಿಯ ಪ್ರಗತಿ ಪರರೈತಸದಾಶಿವ ಶೆಟ್ಟಿಇವರ ಮಾರ್ಗದರ್ಶನದಲ್ಲಿಯುವರೈತರಗುಂಪೊಂದನ್ನುರಚಿಸಲಾಗಿದೆ.ಈ ಗುಂಪಿನಲ್ಲಿಇರುವರೈತರು ಪಾಳು ಬಿಟ್ಟ ಭತ್ತದಗದ್ದೆಯಲ್ಲಿಯಾಂತ್ರೀಕೃತವಾಗಿ ಭತ್ತದಕೃಷಿಯನ್ನು ಕೈಗೊಳ್ಳಲು ಮುಂದಾಗಿದ್ದಾರೆ.ಇವರ ಚಟುವಟಿಕೆಗಳನ್ನು ವೀಕ್ಷಿಸಲುದ.ಕಜಿಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿಡಾ.ಸೆಲ್ವಮಣಿಆರ್.ಜುಲೈ 3 ರಂದು ಮಂಗಳೂರು ತಾಲೂಕಿನಎಕ್ಕಾರುಗ್ರಾಮದಲ್ಲಿರೈತರೊಂದಿಗೆ ಸಮಾಲೋಚನೆ ನಡೆಸಿದರು.

ನಂತರ ಪಾಳುಬಿಟ್ಟ ಭೂಮಿಯಲ್ಲಿ ಭತ್ತ ಕೃಷಿ ನಾಟಿಯಾಂತ್ರೀಕೃತವಾಗಿ ಹಾಗೂ ಸಾಂಪ್ರದಾಯಕವಾಗಿ ಮಾಡಿದ ಬಗ್ಗೆ ಅತಿಕಾರಿಬೆಟ್ಟುಗ್ರಾಮದಲ್ಲಿ ವೀಕ್ಷಿಸಿದರು.ಭತ್ತದ ನಾಟಿಯನ್ನುಯಂತ್ರದಲ್ಲಿ ಮಾಡಿದಲ್ಲಿ ಕೇವಲ 2.5 ಗಂಟೆಯಲ್ಲಿ 1 ಎಕರೆಗದ್ದೆ ನಾಟಿಕಾರ್ಯ ಪೂರ್ಣಗೊಳ್ಳುವುದನ್ನು ನೋಡಿ ಶ್ಲಾಘಿಸಿದರು.ಸಾಂಪ್ರದಾಯಕವಾಗಿಅಂದರೆ ಬೀಜಎರಚಿ ಮಾಡುವ ಭತ್ತದಕೃಷಿಯಲ್ಲಿ ಭತ್ತದೆ ಗಿಡಗಳು ಸಮಾನವಾಗಿ ಬೆಳೆಯುವುದಿಲ್ಲ ಹಾಗೂ ಕಳೆಗಳ ನಿರ್ವಹಣೆ ಕಷ್ಟ ಸಾಧ್ಯವಾಗುವುದು ಮತ್ತು ಪಿಲ್ಲೆಗಳು ಹೆಚ್ಚಿನ ಮಟ್ಟಿಗೆ ಬಾರದೆಇರುವುದರಿಂದ ಇಳುವರಿಯ ಪ್ರಮಾಣಗಣನೀಯವಾಗಿಕಡಿಮೆ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.ಆದ್ದರಿಂದ ಸಾಲು ನಾಟಿಅಥವಾಯಾಂತ್ರೀಕೃತ ನಾಟಿ ಮಾಡುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು ಹಾಗೂ ಕೂಲಿ ಆಳುಗಳ ಸಮಸ್ಯೆಯನ್ನು ಸಹ ನಿವಾರಿಸಬಹುದು. ರೈತರು ಗದ್ದೆಗಳನ್ನು ಪಾಳು ಬಿಡದೆ ಈ ಕೋವಿಡ್ ಸಮಯದಲ್ಲಿಆರ್ಥಿಕ ಮಟ್ಟವನ್ನು ಹೆಚ್ಚಿಸಲುತಮ್ಮತಮ್ಮ ಗದ್ದೆಗಳನ್ನು ಉಳುಮೆಮಾಡಿ ಭತ್ತವನ್ನು ಬೆಳೆಯುವುದು ಉತ್ತಮ. ಇದರಿಂದ ಭೂಮಿಯು ಫಲವತ್ತಾಗಿರುವುದಲ್ಲದೆ, ಸ್ವಂತಉಪಯೋಗಕ್ಕಾಗಿಅಕ್ಕಿಯು ಸಹ ಸಿಗುವುದು. ನವೀನ್ ಪ್ರಭು, ಅತೀಕಾರಿಬೆಟ್ಟುಗ್ರಾಮಇವರು ಭತ್ತ ನಾಟಿಯಂತ್ರವನ್ನು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಪಡೆದುಯಾಂತ್ರೀಕೃತ ನಾಟಿಯಲ್ಲಿ ಭತ್ತದಕೃಷಿಯನ್ನು ಮಾಡುವುದನ್ನುಮುಖ್ಯಕಾರ್ಯ ನಿರ್ವಹಣಾಧಿಕಾರಿಯವರು ವೀಕ್ಷಿಸಿದರು.

ಈ ರೈತರುತಮ್ಮಜಮೀನಿನಲ್ಲಿಅಲ್ಲದೆ ಬೇರೆರೈತರಿಗೆಟ್ರೇನಲ್ಲಿ ನರ್ಸರಿಯನ್ನುತಯಾರುಮಾಡಿಅವರಜಮೀನಿನಲ್ಲಿಯಾಂತ್ರೀಕೃತ ನಾಟಿಯನ್ನು ಸಹ ಬಾಡಿಗೆಗೆ ಮಾಡಿಕೊಡುತ್ತಿದ್ದು, ಇಚ್ಛೆ ಇದ್ದಲ್ಲಿರೈತರು ಲಾಭದಾಯಕವಾಗಿ ಭತ್ತದಕೃಷಿಯನ್ನು ಮಾಡಬಹುದುಎಂದು ತೋರಿಸಿರುತ್ತಾರೆ.ದಕ್ಷಿಣಕನ್ನಡಜಿಲ್ಲೆಯಲ್ಲಿ ಭತ್ತದ ಕೃಷಿ ನಾಶವಾಗಲು ಬಿಡದೆರೈತರು ಭತ್ತದಕೃಷಿಯಲ್ಲಿ ತೊಡಗಿಸಿಕೊಂಡು ಕೃಷಿ ಇಲಾಖೆಯಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಹಾಗೂ ತಾಂತ್ರಿಕತೆಗಳನ್ನು ಪಡೆದು ಲಾಭದಾಯಕವಾಗಿ ಭತ್ತದಕೃಷಿಯನ್ನು ಮಾಡುವುದುಉತ್ತಮಎಂದು ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರೆ ಪ್ರಕಟಣೆ ತಿಳಿಸಿದೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...