ಮಸೀದಿ ಇಮಾಂ-ನಿವೃತ್ತಿ ವೇತನಕ್ಕೆ ಅರ್ಜಿ ಆಹ್ವಾನ

(www.vknews.com) : ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಾವಣೆಗೊಂಡ ದಕ್ಷಿಣಕನ್ನಡಜಿಲ್ಲೆಯ ಮಸೀದಿಗಳಲ್ಲಿ10 ವರ್ಷಕ್ಕಿಂತ ಮೇಲ್ಪಟ್ಟು ಸೇವೆಗೈದು ಕೆಲಸದಿಂದ ನಿವೃತ್ತಿ ಹೊಂದಿ65 ವರ್ಷ ಪೂರ್ತಿಗೊಳಿಸಿದ ಇಮಾಮ್‍ರವರಿಗೆ ಮಾಸಿಕ ರೂ.2,000ಮತ್ತು ಮೌಝನ್ (ಮುಕ್ರಿ)ರವರಿಗೆ ಮಾಸಿಕ ರೂ.1,500 ನಿವೃತ್ತಿ ವೇತನಕರ್ನಾಟಕರಾಜ್ಯ ವಕ್ಫ್ ಮಂಡಳಿಯ ವತಿಯಿಂದ ನೀಡಲಾಗುತ್ತದೆ.

ಅರ್ಜಿ ನಮೂನೆಯನ್ನು ಜಿಲ್ಲಾ ವಕ್ಫ್‍ ಕಚೇರಿಯಿಂದ ಪಡೆದುಕೊಂಡು ಭರ್ತಿ ಮಾಡಿ ಆಧಾರ್‍ಕಾರ್ಡ್ ನಕಲು ಪ್ರತಿ, ಅರ್ಜಿದಾರರ ಸೇವಾದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಆದಾಯ ದೃಢೀಕರಣಪತ್ರ ಅಥವಾ ಬಿ.ಪಿ.ಎಲ್. ಕಾರ್ಡ್ ಪ್ರತಿ, ವಿದ್ಯಾಭ್ಯಾಸದ ಬಗ್ಗೆ ದೃಢೀಕರಣ ಪತ್ರ್ರ (ಧಾರ್ಮಿಕ& ಲೌಕಿಕ) ದಾಖಲೆಗಳೊಂದಿಗೆ ದ್ವಿಪ್ರತಿಯಲ್ಲಿಜಿಲ್ಲಾ ವಕ್ಫ್‍ಕಚೇರಿ, ಅಲ್ಫಸಂಖ್ಯಾತರಕಲ್ಯಾಣ ಭವನದ2ನೇ ಮಹಡಿ, ಓಲ್ಡ್‍ಕೆಂಟ್‍ರಸ್ತೆ, ಪಾಂಡೇಶ್ವರ, ಮಂಗಳೂರು ಇಲ್ಲಿಗೆಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿಜಿಲ್ಲಾ ವಕ್ಫ್‍ಕಚೇರಿಯದೂರವಾಣಿ ಸಂಖ್ಯೆ0824 2420078ನ್ನು ಸಂಪರ್ಕಿಸಲುಜಿಲ್ಲಾ ವಕ್ಫ್ ಸಲಹಾ ಸಮಿತಿಯಅಧ್ಯಕ್ಷಹಾಜಿಯು.ಕೆ. ಮೋನು ಕನಚೂರುಇವರ ಪ್ರಕಟಣೆ ತಿಳಿಸಿದೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...