ಖತೀಬ್ ಪರಂಪರೆಯ ಹಿರಿಯ ವಿದ್ವಾಂಸ ವಿ.ಎಂ. ಮಹಮೂದ್ ಮುಸ್ಲಿಯಾರ್ ವಿಟ್ಲ ಇನ್ನಿಲ್ಲ

(www.vknews.com) : ಹಲವು ಶತಮಾನದ ಇತಿಹಾಸವಿರುವ ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ್ ಪರಂಪರೆಯಲ್ಲಿ ಖ್ಯಾತಿ ಪಡೆದಿರುವ ಮರ್ಹೂಂ ಅಲ್ ಹಾಜ್ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅವರ ಪುತ್ರ ವಿ.ಎಂ. ಮಹಮೂದ್ ಮುಸ್ಲಿಯಾರ್ ಅವರು ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ 12 ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿ 1998ರಲ್ಲಿ ನಿವೃತ್ತರಾಗಿದ್ದರು.

ವಿದ್ವತ್ ಕುಟುಂಬದ ಪರಂಪರೆಯ ಸಾತ್ವಿಕತೆ, ನಿರ್ಮಲ ಹೃದಯ, ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ವಿ.ಎಂ. ಮಹಮೂದ್ ಮುಸ್ಲಿಯಾರ್ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿಧೇಯರಾಗಿ 07/07/2020 ಮಂಗಳವಾರ ಸಂಜೆ 06:10ಕ್ಕೆ ವಿಟ್ಲ ಮೇಗಿನಪೇಟೆಯ ಸ್ವಗೃಹದಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇನೆ. ಅವರ ಮಗ್ಫಿರತ್ ಗಾಗಿ ಪ್ರಾರ್ಥಿಸಲು ವಿನಂತಿ.

– ರಶೀದ್ ವಿಟ್ಲ.

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...