ಗುರುಪುರ ಗುಡ್ಡಕುಸಿತ ಪ್ರದೇಶಕ್ಕೆ ಎಸ್ ವೈ ಎಸ್ ಜಿಲ್ಲಾ ನಾಯಕರ ಬೇಟಿ

(www.vknews.com) : ಗುರುಪುರ ಕೈಕಂಬ ಬಂಗ್ಲೆಗುಡ್ಡೆ ಎಂಬಲ್ಲಿ ಗುಡ್ಡ ಕುಸಿದು ಇಬ್ಬರು ಮೃತಪಟ್ಟ ಸ್ಥಳವನ್ನು ಸುನ್ನಿ ಯುವಜನ ಸಂಘ ದಕ್ಷಿಣಕನ್ನಡ ಸಮಿತಿ ನಾಯಕರು ಸಂದರ್ಶಿಸಿದರು.

ಘಟನಾ ಸ್ಥಳವನ್ನು ಕಂಡು ತೀವ್ರ ದುಃಖ ವ್ಯಕ್ತಪಡಿಸಿತು. ಕುಸಿತ ಗೊಂಡ ಸ್ಥಳದಲ್ಲಿ ಇಸಾಬ ತಂಡ ಎರಡನೇ ದಿನ ಕೂಡಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದು ಇವರ ಸೇವೆ ಶ್ಲಾಘನೀಯವಾಗಿದೆ ಎಂದು ಜಿಲ್ಲಾಧ್ಯಕ್ಷ ಸಿಎಚ್ ಮಹಮ್ಮದ್ ಅಲಿ ಸಖಾಫಿ ತಿಳಿಸಿದರು. ಮೃತಪಟ್ಟ ಮಕ್ಕಳ ಪೋಷಕರು ಮತ್ತು ಇತರ ಸಂತ್ರಸ್ತರನ್ನು ಮಾತನಾಡಿಸಿ, ಸಂತಾಪ ವ್ಯಕ್ತ ಪಡಿಸಲಾಯಿತು.

ಸಂತ್ರಸ್ತರ ಪುನರ್ವಸತಿ ಮತ್ತಿತರ ಅಗತ್ಯ ನೆರವು ನೀಡಲು ಎಲ್ಲರೂ ಮುಂದೆ ಬರಬೇಕೆಂದು ಜಿಲ್ಲಾ ನಾಯಕರು ಜನರಲ್ಲಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಸಿ ಎಚ್ ಮಹಮ್ಮದಲಿ ಸಖಾಫಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಉಪಾಧ್ಯಕ್ಷರಾದ ಎನ್ ಎಸ್ ಉಮರ್ ಮಾಸ್ಟರ್, ಬದ್ರುದ್ದೀನ್ ಅಝ್ಹರಿ ಕೈಕಂಬ,ಟೀಂ ಇಸಾಬ  ಜಿಲ್ಲಾ ಕಾರ್ಯದರ್ಶಿ ಎಂಕೆಎಂ ಇಸ್ಮಾಯಿಲ್ ಕಿನ್ಯ, ಜಿಲ್ಲಾ ಸದಸ್ಯ ಬಿ .ಎಚ್ ಇಸ್ಮಾಯಿಲ್ ಕೆ. ಸಿ ರೋಡು,ಎಸ್.ಎಂ.ಎ ಕೈಕಂಬ ರೀಜಿನಲ್ ಅಧ್ಯಕ್ಷ ಅಬ್ದುಲ್ ಅಝೀಝ್ ಸೈಟ್, SYS ಕೈಕಂಬ ಸೆಂಟರ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಬಶೀರ್, SYS ಬಂಗ್ಳೆಗುಡ್ಡೆ ಬ್ರಾಂಚ್ ಅಧ್ಯಕ್ಷ ಅಬ್ದುಲ್ ಅಝೀಝ್ ಬಂಗ್ಲೆಗುಡ್ಡೆ, ಬಂಗ್ಲೆಗುಡ್ಡೆ ಜಮಾತ್ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಮದ್,SSF ಮೂಡಬಿದ್ರೆ ಡಿವಿಷನ್ ಅಧ್ಯಕ್ಷ ರಿಯಾಝ್ ಸ ಅದಿ ಗುರುಪುರ, ಮರ್ಕಝ್ ಕೈಕಂಬ ವಿಂಗ್  ಅಧ್ಯಕ್ಷ ಅಬುದಾಲಿ,ನಜೀಬ್ ಕೈಕಂಬ,ಶರೀಫ್ ಅಡ್ಡೂರು ಮುಂತಾದವರು ಉಪಸ್ಥಿತರಿದ್ದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...