ಮುಲ್ಕಿ: ತಾಜುಲ್ ಉಲಮಾ ರಿಲೀಫ್ ಆಂಡ್ ಚಾರಿಟೇಬಲ್ ಟ್ರಸ್ಟ್” ಇದರ ವಲಯ ಮಟ್ಟದ ಉದ್ಘಾಟನೆ

ಮುಲ್ಕಿ (www.vknews.com) : ತಾಜುಲ್ ಉಲಮಾ ರಿಲೀಫ್ ಆಂಡ್ ಚಾರಿಟೇಬಲ್ ಟ್ರಸ್ಟ್” ಇದರ ವಲಯ ಮಟ್ಟದ ಉದ್ಘಾಟನಾ ಕಾರ್ಯಕ್ರಮವು ಮುಲ್ಕಿಯ ಆಪತ್ಭಾಂಧವ ಶೇವಾಶ್ರಮದಲ್ಲಿ ನಡೆಯಿತು

ಕಳೆದ ಹಳವಾರು ವರ್ಷಗಳಿಂದ ಸಾಮಾಜಿಕ ಸಂಘಟನೆಗಳಾದ ಎಸ್.ವೈ.ಎಸ್”, ಎಸ್.ಎಸ್.ಎಫ್”, ಹಾಗೂ ವಿದೇಶದಲ್ಲಿರುವ ಸಂಘಟನೆ ಕೆ.ಸಿ.ಎಪ್” ಇದರ ಸದಸ್ಯರುಗಳ ಸಹಕಾರದೊಂದಿಗೆ ಪಕ್ಷಿಕೆರೆ- ಕಿನ್ನಿಗೋಳಿ ಪರಿಸರದಲ್ಲಿ ಬಡ-ನಿರ್ಗತಿಕ ಕುಟುಂಬದ ಆಸರೆಯಾಗಿ ಕಾರ್ಯಾಚರಿಸುತಿದ್ದು, ಇದೀಗ ತಾಜುಲ್ ಉಲಮಾ ರಿಲೀಫ್ ಆಂಡ್ ಚಾರಿಟೇಬಲ್ ಟ್ರಸ್ಟ್” ಮುಖಾಂತರ ತನ್ನ ‌ಕಾರ್ಯ ವ್ಯಾಪ್ತಿಯನ್ನು ‌ಮುಲ್ಕಿ ವಲಯ ಮಟ್ಟಕ್ಕೆ ‌ವಿಸ್ತರಿಸಿ, ವಲಯ ವ್ಯಾಪ್ತಿಯಲ್ಲಿನ ಬಡ-ನಿರ್ಗತಿಕ ಕುಟುಂಬಗಳಿಗೆ ಮಾಸಿಕ ರೇಶನ್ ಕೊಡುವ ಯೋಜನೆಯನ್ನು ಹಾಕಿಕೊಂಡಿರುತ್ತದೆ.

ಇದರ ಅಧಿಕೃತ ಉದ್ಘಾಟನಾ ಸಮಾರಂಭವನ್ನು ಮುಲ್ಕಿ, ಕಾರ್ನಾಡಿನಲ್ಲಿ ಕಾರ್ಯಚರಿಸುತ್ತಿರುವ ಮೈಮುನ ಫೌಂಡೇಶನ್, ಆಪತ್ಭಾಂಧವ ಸೈಕೋ ರಿಹಾಬಿಲೇಶನ್ ಟ್ರಸ್ಟ್” ನಲ್ಲಿ, ಅದರ ಮುಖ್ಯಸ್ಥ ಆಪತ್ಬಾಂದವ ಆಸಿಫ್ ರವರ ಮುಖಾಂತರ ಉದ್ಘಾಟನೆ ಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

ಪ್ರಥಮ ಹಂತದಲ್ಲಿ ಆಶ್ರಮದಲ್ಲಿರುವ ವಿಶೇಷ ಅತಿಥಿ ಗಳಿಗೆ ಮದ್ಯಾಹ್ನದ ಭೋಜನ ನೀಡುವುದರ ಜೊತೆಗೆ ಸುಮಾರು ಹತ್ತು ಸಾವಿರ ರುಪಾಯಿಗಳ ಆಹಾರ ಸಾಮಗ್ರಿಗಳನ್ನು ದಾನ ನೀಡಿ, ಟ್ರಸ್ಟ್ ನ ಅದ್ಯಕ್ಷ ರಾದ ಝೈನುದ್ದೀನ್ ಹಾಜಿ” ಆಶಿರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ರಝಾ ಅಂಜದಿ, ಕೋಶಾಧಿಕಾರಿ ಸಿದ್ದೀಕ್ ಪುನರೂರು, ಎಸ್ ವೈ ಎಸ್ ಸುರತ್ಕಲ್ ವಲಯ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಫಿ ಕಿನ್ನಿಗೋಳಿ, ಎಸ್.ಎಸ್.ಎಫ್. ಮುಲ್ಕಿ ಸೆಕ್ಟರ್ ಅಧ್ಯಕ್ಷರಾದ ಶಂಸುದ್ದೀನ್ ಅಹ್ಸನಿ ಬಲ್ಕುಂಜೆ, ಹಾಗೂ ಸದಸ್ಯರಾದ ಸುಲೈಮಾನ್ ಪಕ್ಷಿಕೆರೆ, ನಯಾಝ್ ಕಾಪಿಕಾಡ್, ಬಶೀರ್ ಕಾರ್ನಾಡ್ ,ಬಾವಾಕ ಹೆಜಮಾಡಿ, ಅಬ್ದುರ್ರಹ್ಮಾನ್ ಗುತ್ತಕಾಡು,ನಗರ ಸಭೆ ಸದಸ್ಯರಾದ ಪುತ್ತುಬಾವ, ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಇನ್ನಿತರರು ಉಪಸ್ಥಿತರಿದ್ದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...