ಉಪ್ಪಿನಂಗಡಿ ವಿಪತ್ತು ನಿರ್ವಹಣಾ ತಂಡಕ್ಕೆ ಜಾಕೆಟ್ ಮತ್ತು ಗಮ್ ಬೂಟ್ ವಿತರಣೆ

ಉಪ್ಪಿನಂಗಡಿ(ವಿಶ್ವಕನ್ನಡಿಗ ನ್ಯೂಸ್): ದಿನಾಂಕ: 07-07-2020ನೇ ಮಂಗಳವಾರದಂದು ಉಪ್ಪಿನಂಗಡಿ ಘಟಕದ ವಿಪತ್ತು ನಿರ್ವಹಣಾ ತಂಡಕ್ಕೆ ದ.ಕ. ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ 5 ಲೈಫ್ ಜಾಕೆಟ್, 5 ಗಮ್‍ಬೂಟ್, ಸ್ಟ್ರೆಚ್ಚರ್, ಟಾರ್ಚ್‍ಲೈಟ್ ಮುಂತಾದ ವಿಪತ್ತು ನಿರ್ವಹಣಾ ಸರಕುಗಳನ್ನು ನೀಡಲಾಯಿತು.

ಮಳೆಗಾಲದ ನೆರೆ ವಿಪತ್ತು ಸಂದರ್ಭಗಳಲ್ಲಿ ದ.ಕ. ಜಿಲ್ಲೆಯಾದ್ಯಂತ ಕೆಲಸ ನಿರ್ವಹಿಸುತ್ತಿರುವ ದ.ಕ. ಜಿಲ್ಲಾ ಗೃಹರಕ್ಷಕದಳದ ವಿಪತ್ತು ನಿರ್ವಹಣಾ ತಂಡಕ್ಕೆ ಜಿಲ್ಲಾ ವಿಪತ್ತು ನಿರ್ವಹಣಾ ನಿಧಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು 2020 ಇಸವಿಯಲ್ಲಿ ಸುಮಾರು 50 ಲೈಫ್ ಜಾಕೆಟ್, 50 ಗಮ್‍ಬೂಟ್, 10 ಟಾರ್ಚ್‍ಲೈಟ್, 15 ಹಾರೆ, 3 ಗಾಳಿ ತುಂಬುವ ಯಂತ್ರ, 8 ಸ್ಟ್ರೆಚ್ಚರ್, 1 ವಾಟರ್ ಪಂಪ್ ಮತ್ತು 5 ಬಂಡಲ್ ರೋಪ್, ಗಾಳಿ ತುಂಬಬಹುದಾದ ಬೋಟ್‍ಗಳನ್ನು ನೀಡಲಾಗಿತ್ತು.

ನೆರೆ ವಿಪತ್ತಿನ ಮತ್ತು ಇತರ ನೈಸರ್ಗಿಕ ವಿಪತ್ತಿನ ಸಂದರ್ಭಗಳಲ್ಲಿ ಗೃಹರಕ್ಷಕರು ಸಮಾಜದ ಆಸ್ತಿಪಾಸ್ತಿ ಮತ್ತು ಜನರ ಪ್ರಾಣರಕ್ಷಣೆ ಮಾಡುವಲ್ಲಿ ಈ ಪರಿಕರಗಳು ಬಹಳ ಉಪಯುಕ್ತ ಎಂದು ಸಮಾದೇಷ್ಟ ಡಾ|| ಮುರಲೀಮೋಹನ್ ಚೂಂತಾರು ತಿಳಿಸಿದರು.

ಉಪ್ಪಿನಂಗಡಿ ಘಟಕದ ಘಟಕಾಧಿಕಾರಿ ಶ್ರೀ ದಿನೇಶ್ ಅವರಿಗೆ ಈ ಪರಿಕರಗಳನ್ನು ಹಸ್ತಾಂತರಿಸಲಾಯಿತು. ಉಪಸಮಾದೇಷ್ಟರಾದ ರಮೇಶ್, ಗೃಹರಕ್ಷಕರಾದ ವಸಂತ, ಜನಾರ್ದನ ಆಚಾರ್ಯ ಉಪಸ್ಥಿತರಿದ್ದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...