ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ರೇಷ್ಮೆ ನಗರದಲ್ಲಿ ಒಂದೊಂದು ದಿನ ಒಂದು ಇಲಾಖೆಯ ಸಿಬ್ಬಂದಿಗೆ ಕೊರೊನಾ ಸೋಂಕು ಧೃಡಪಡುತ್ತಿದ್ದು ಸಿಬ್ಬಂದಿ ಮತ್ತು ನಾಗರಿಕರಿಗೆ ಆತಂಕ ಮನೆ ಮಾಡಿದೆ.
ನಗರದಲ್ಲಿ ಪೋಲಿಸ್ ಇಲಾಖೆಯ ಅಧಿಕಾರಿಯೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಬಳಿಕ ಅವರು ಚಿಕಿತ್ಸೆ ಪಡೆದುಕೊಂಡು ಆರೋಗ್ಯವಾಗಿದ್ದಾರೆ ಮತ್ತೊಂದಡೆ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಪ್ರಯೋಗಾಲಯದ ತಜ್ಞೆಯೊಬ್ಬರಿಗೆ ನಿನ್ನೆಯ ದಿನ ಕೊರೊನಾ ಸೋಂಕು ಧೃಡಪಟ್ಟ ಬಳಿಕ ಇದೀಗ ತಾಲೂಕಿನ ಶಕ್ತಿ ಕೇಂದ್ರವೆಂದು ಪ್ರತಿಬಿಂಬಿಸುವ ತಾಲೂಕು ಕಚೇರಿಯ ಸಕಾಲ ವಿಭಾಗದ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ ಇದರಿಂದ ನಾಗರಿಕರಲ್ಲಿ ಭೀತಿ ಆವರಿಸಿದೆ.
ತಾಲೂಕು ಕಚೇರಿಯ ಸಕಾಲ ವಿಭಾಗದ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟ ಬಳಿಕ ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ಮೂಕರ್ತಿ ಮತ್ತು ನಗರಸಭೆಯ ಪೌರಾಯುಕ್ತ ಶ್ರೀನಿವಾಸ್,ಆರೋಗ್ಯ ನಿರೀಕ್ಷಕಿ ಶೋಭಾ ಹಾಗೂ ಸಿಬ್ಬಂದಿ ತಾಲೂಕು ಕಚೇರಿಯಲ್ಲಿ ಸೋಂಕು ನಿವಾರಕ ಔಷಧಿಯನ್ನು ಸಿಂಪಡಿಸಿ ಶುಚಿಗೊಳಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಸಕಾಲ ವಿಭಾಗವನ್ನು ಸೀಲ್ಡೌಯನ್ ಮಾಡಿದ್ದಾರೆ ಸಾರ್ವಜನಿಕ ಕೆಲಸಗಳ ನಿಮಿತ್ತ ಬರುವ ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ-ಸ್ಯಾನಿಟೈಸರ್ ಹಾಕಿಕೊಂಡು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂದು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ.
ವರದಿ: ಎಂ.ಎ.ತಮೀಮ್ ಪಾಷ ಶಿಡ್ಲಘಟ್ಟ