ಕೊರೊನಾ ಸೋಂಕು ಪ್ರಭಾವ ಕ್ಷೇತ್ರದ ಅಭಿವೃಧ್ಧಿ ಅನುದಾನ ಕಡಿತ: ಶಾಸಕ ವಿ.ಮುನಿಯಪ್ಪ


ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರಗಳ ಅಭಿವೃಧ್ಧಿ ಅನುದಾನವನ್ನು ಸರ್ಕಾರ ಕಡಿತಗೊಳಿಸಿದೆ ಮುಂದಿನ ದಿನಗಳಲ್ಲಿ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿದರೆ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃಧ್ಧಿ ಕಾಮಗಾರಿಗಳನ್ನು ನಡೆಸಲಾಗುವುದೆಂದು ಶಾಸಕ ವಿ.ಮುನಿಯಪ್ಪ ಹೇಳಿದರು.,

ತಾಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿಯ ದೊಣ್ಣಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 2.5 ಕೋಟಿ ರೂಗಳ ವೆಚ್ಚದಲ್ಲಿ ವಾರಹುಣಸೇನಹಳ್ಳಿ-ಬಸವನಪರ್ತಿ-ಚಿಕ್ಕಪಾಪನಹಳ್ಳಿ ಹಾಗೂ ದೊಣ್ಣಹಳ್ಳಿ ರಸ್ತೆಗಳ ಅಭಿವೃಧ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕಣ್ಣಿಗೆ ಕಾಣದಿರುವ ಕೊರೊನಾ ಸೋಂಕು ಜನರ ನೆಮ್ಮದಿ ಭಂಗ ಮಾಡಿದೆ ರಾಜ್ಯ ಸರ್ಕಾರ ಸೋಂಕು ನಿವಾರಣೆ ಮಾಡಲು ಕ್ಷೇತ್ರಗಳ ಅನುದಾನವನ್ನು ಹಿಂಪಡೆದಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃಧ್ಧಿ ಕಾಮಗಾರಿಗಳು ನಡೆಸಲು ತೊಂದರೆಯಾಗಿದೆ ಮುಂದಿನ ದಿನಗಳಲ್ಲಿ ಸೋಂಕು ನಿವಾರಣೆಯಾಗಿ ಮತ್ತಷ್ಟು ಅಭಿವೃಧ್ಧಿ ಕಾಮಗಾರಿಗಳನ್ನು ನಡೆಸಲಾಗುವುದೆಂದರು.


ಕೊರೊನಾ ಸೋಂಕಿನಿಂದ ದರ ಕುಸಿತದಿಂದ ಸಂಕಷ್ಟದಲ್ಲಿ ಸಿಲುಕಿರುವ ರೇಷ್ಮೆ ಬೆಳೆಗಾರರಿಗೆ ಕೆಜಿ ರೇಷ್ಮೆ ಗೂಡಿಗೆ 40 ರೂಗಳ ಪ್ರೋತ್ಸಾಹಧನ ನೀಡಲು ರೇಷ್ಮೆ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಸರ್ಕಾರ ಸಹ ಸಕರಾತ್ಮಕವಾಗಿ ಸ್ಪಂದಿಸಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಜೊತೆಗೆ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಸಹ ಸಂಕಷ್ಟದಲ್ಲಿ ಸಿಲುಕಿದ್ದಾರೆ ಅವರ ನೂಲು ಖರೀದಿ ಮಾಡಲು ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇವೆ ಅವರು ಗುರುವಾರದಂದು ಶಿಡ್ಲಘಟ್ಟ ನಗರಕ್ಕೆ ಭೇಟಿ ನೀಡಲು ಸಮ್ಮತ್ತಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ವಿ.ಸುಭ್ರಮಣಿ,ಲೋಕೋಪಯೋಗಿ ಇಲಾಖೆಯ ಎಇಇ ವಿನೋದ್,ಜೆಇ ಮುರಳಿ,ಕಾಂಗ್ರೇಸ್ ಮುಖಂಡರಾದ ನಿರಂಜನ್,ಗುತ್ತಿಗೆದಾರರ ಟಿಕೆ ನಟರಾಜ್,ಕುಂದಲಗುರ್ಕಿ ಮುನಿರೆಡ್ಡಿ,ರಾಜ್ಯ ಎನ್.ಎಸ್.ಯು.ಐ ಸಂಚಾಲಕ ಕುಂದಲಗುರ್ಕಿ ಮುನೀಂದ್ರ,ಹಿರಿಯ ಮುಖಂಡ ಕೆಎಂ ವೆಂಕಟೇಶ್, ಕ್ಯಾತಪ್ಪ, ಆಂಜಿನೇಯರೆಡ್ಡಿ, ಚಂದ್ರಪ್ಪ, ಸೊಣ್ಣೆಗೌಡ, ಮನೋಹರ್, ಜಯರಾಂ, ಆನಂದ್, ರಮೇಶ್, ರಾಮಚಂದ್ರರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಎಂ.ಎ.ತಮೀಮ್ ಪಾಷ ಶಿಡ್ಲಘಟ್ಟ

ವರದಿಗಾರರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...