ಗುರುಪುರ ಬಂಗ್ಲೆ ಗುಡ್ಡೆಯಲ್ಲಿ ಸತತ 3 ದಿನಗಳಿಂದ SDPI ಯಿಂದ ಕಾರುಣ್ಯ ಸೇವೆ

ಗುರುಪುರ(ವಿಶ್ವಕನ್ನಡಿಗ ನ್ಯೂಸ್): ಬಂಗ್ಲೆಗುಡ್ಡೆ ಎಂಬಲ್ಲಿ ಗುಡ್ಡೆ ಜರಿದು ಬಿದ್ದ ಸ್ಥಳದಲ್ಲಿ ಸತತ ಮೂರನೇ ದಿನವೂ ಅಸಾಹಾಯಕ ಕುಟುಂಬಕ್ಕೆ ಸಾಂತ್ವನ ಹೇಳುತ್ತಾ ಅವರ ಕಷ್ಟಕ್ಕೆ ಸ್ಪಂದಿಸುತ್ತಿರುವ ಎಸ್.ಡಿ.ಪಿ.ಐ ಗುರುಪುರ ಕೈಕಂಬ ವಲಯ ಸಮಿತಿಯ ಕಾರುಣ್ಯ ಸೇವೆ ನಿಜಕ್ಕೂ ಶ್ಲಾಘನೀಯ.

ಗುರುಪುರ ಬಂಗ್ಲೆಗುಡ್ಡೆಯ ಮಠದ ಗುಡ್ಡೆ ಎಂಬಲ್ಲಿ ಗುಡ್ಡೆ ಜರಿದು ಬಿದ್ದು ಹಲವಾರು ಮನೆಗಳನ್ನು ಕಳೆದುಕೊಂಡಿರುವ ಅಸಾಹಾಯಕ ಕುಟುಂಬಕ್ಕೆ ಸಾಂತ್ವನ ಹೇಳುತ್ತಾ ಅವರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಎಸ್ಡಿಪಿಐ ಕೈಕಂಬ ವಲಯ ಸಮಿತಿಯ ನಿಸ್ವಾರ್ಥ ಮಾನವೀಯ ಸೇವೆಗೆ ಸಾರ್ವಜನಿಕರಿಂದ ಬಹಳ ಪ್ರಶಂಸೆ ವ್ಯಕ್ತವಾಗಿದೆ.

ಇದೀಗ ಈ ಪ್ರದೇಶದಲ್ಲಿ ವಾಸಿಸಲು ಅಸಾಧ್ಯವಾಗಿರುವಂತಹ ಕುಟುಂಬಗಳನ್ನು ಸೂಕ್ತವಾದ ಸ್ಥಳಕ್ಕೆ ತೆರವುಗೊಳಿಸುವ ಕಾರ್ಯವೂ ಇಂದು ಇಲ್ಲಿ ಎಸ್ಡಿಪಿಐ ಕಾರ್ಯಕರ್ತರಿಂದ ನಡೆಯಿತು.

ಅಸಾಹಾಯಕ ಕುಟುಂಬಕ್ಕೆ ಸದಾ ಬೆನ್ನೆಲುಬಾಗಿ ನಿಂತಿರುವ ಎಸ್ಡಿಪಿಐ ಪಕ್ಷದ ನಿಸ್ವಾರ್ಥ ಸೇವೆಗೆ ಬಿಗ್ ಸೆಲ್ಯೂಟ್.
ಈ ಸಂದರ್ಭದಲ್ಲಿ ಉಸ್ಮಾನ್ ಗುರುಪುರ , ಹಕೀಮ್ ಅಡ್ಡೂರು, ಅಶ್ರಫ್ ಕೈಕಂಬ , ನಿಹಾಲ್ ಕೈಕಂಬ , ಮಜೀದ್ ಮಳಲಿ , ಮುಝಮ್ಮಿಲ್ ನೂಯಿ ಅಡ್ಡೂರು, ಫಾರಿಶ್ ಸೂರಲ್ಪಾಡಿ, ಹಾಗೂ ಪಕ್ಷದ ಇನ್ನಿತರ ಕಾರ್ಯಕರ್ತರು ಜೊತೆಯಾಗಿ ಈ ಸೇವೆಯನ್ನು ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.

ಸದಾ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕ ಸೇವೆಗಳಲ್ಲಿ ಜನರ ಪ್ರೀತಿಗೆ ಪಾತ್ರವಾಗಿರುವ ಎಸ್ಡಿಪಿಐ ಪಕ್ಷದ ಮಾನವೀಯತೆಯನ್ನು ಸೃಷ್ಟಿಕರ್ತನು ಸ್ವೀಕರಿಸಲಿ. ದೇವರು ನಿಮಗೆಲ್ಲರಿಗೂ ಒಳಿತನ್ನು ನೀಡಲಿ ಎಂದು ಹಾರೈಸುತ್ತಾ ಮನದಾಳದಿ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇವೆ..!

_ಪ್ರತ್ಯಕ್ಷದರ್ಶಿಗಳು , ಗುರುಪುರ ಕೈಕಂಬ , ಬಂಗ್ಲೆಗುಡ್ಡೆ ಸೈಟ್_

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...