ಒಮಾನ್(ವಿಶ್ವಕನ್ನಡಿಗ ನ್ಯೂಸ್): ಸುಲ್ತಾನತ್ ಆಫ್ ಒಮಾನಿನಲ್ಲಿ ಇಂದು 1889 ಕೋವಿಡ್-19 ಕೊರೋನ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 53614 ಕ್ಕೆ ತಲುಪಿದೆ.
ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆಯ ಜೊತೆಗೆ ಮೃತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಇಂದು 8 ಜನರು ಮೃತರಾಗಿದ್ದು, ಮೃತರ ಸಂಖ್ಯೆ 244 ಕ್ಕೆ ತಲುಪಿದೆ.
ಈವರೆಗಿನ ಸೋಂಕಿತರಲ್ಲಿ 34225 ಜನರು ಚೇತರಿಸಿಕೊಂಡಿದ್ದಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯವಾಗಿದ್ದು, ಮಾಸ್ಕ್ ದರಿಸದೇ ಹೊರಗಿಳಿದರೆ 100 ಒಮಾನಿ ರಿಯಾಲ್ ದಂಡ ಕಟ್ಟಬೇಕಾಗುತ್ತದೆ.
ನಿಯಮಾವಳಿಗಳೊಂದಿಗೆ ವ್ಯಾಪಾರ ಮಳಿಗೆಗಳು ತೆರೆದಿದ್ದು, ಪ್ರಾರ್ಥನಾ ಮಂದಿರಗಳು ತೆರೆಯುವ ಬಗ್ಗೆ ಈವರೆಗೆ ಯಾವುದೇ ಆದೇಶಗಳು ಬಂದಿಲ್ಲ.