ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಚುನಾವಣಾ ನಿರ್ವಹಣಾ ನಿಯಮ 1961 ತಿದ್ದುಪಡಿಯನ್ನು ಹಿಂತೆಗೆದುಕೊಳ್ಳುವಂತೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರು ಡಾಕ್ಟರ್ ಎಸ್ ಕ್ಯೂ ಆರ್ ಇಲಿಯಾಸ್ ಆಗ್ರಹಿಸಿದ್ದಾರೆ.
ಭಾರತೀಯ ಚುನಾವಣೆ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ಅವರಿಗೆ ಪತ್ರ ಬರೆದು, ಚುನಾವಣೆ ನಿರ್ವಹಣೆ ನಿಯಮ 1961 ತಿದ್ದುಪಡಿ ಕುರಿತು ಕಾನೂನು ಮತ್ತು ನ್ಯಾಯ ಮಂಡಳಿಯ ಭಾರತೀಯ ಚುನಾವಣೆ ಅಯೋಗದ ಸಲಹೆಯೊಂದಿಗೆ ತಿದ್ದುಪಡಿ ಯನ್ನು ಯಾವುದೇ ರಾಜಕೀಯ ಪಕ್ಷಗಳ ಮಧ್ಯಸ್ಥಿಕೆ ಇಲ್ಲದೆ ಜಾರಿಯಲ್ಲಿ ತಂದಿದೆ.
ಭಾರತೀಯ ಚುನಾವಣೆ ಆಯೋಗ ವಕ್ತಾರರಾದ ಶೇಫಾಲ ಶರಣ್ ರವರು ಕೇಂದ್ರೀಯ ಕಾನೂನು ಮತ್ತು ನ್ಯಾಯ ಮಂಡಳಿಯ ಗೆಜೆಟ್ ನಲ್ಲಿ ಹೊರಡಿಸಿದ ಅಧಿಸೂಚನೆಯನ್ನು 19 ಜುಲೈ 2020 ರಂದು ಟ್ವೀಟ್ ಮಾಡಿದ್ದರು. ಈ ತಿದ್ದುಪಡಿಯಲ್ಲಿ ಜನರ ಪ್ರಾತಿನಿದ್ಯ ಕಾಯಿದೆಯ ಬದಲಾವಣೆ 1951ರಲ್ಲಿ ಉಂಟಾಗುತ್ತದೆ. ಈ ತಿದ್ದುಪಡಿ 65 ವರ್ಷ ಮೇಲ್ಪಟ್ಟ ಮತದಾರರ ಮಾಹಿತಿಯನ್ನು ಪೋಸ್ಟಲ್ ಬ್ಯಾಲೆಟ್ ಮೂಲಕ ಅತಿಹೆಚ್ಚು ಪ್ರಮಾಣದಲ್ಲಿ ಸಂಘಟಿತ ಆಡಳಿತ ಮತದಾರರ ಮುಂದೆ ತೆರೆದಿಡುತ್ತದೆ ಮತ್ತು ಬ್ಯಾಲೆಟಿನ ಅಸುರಕ್ಷತೆಯಿಂದ ಮತ ಚಲಾವಣೆಯ ಪ್ರಕ್ರಿಯೆಯ ಭದ್ರತೆಗೆ ಧಕ್ಕೆ ತರುತ್ತದೆ.
ಈ ಹಿಂದೆ ಯಾವಾಗಲೂ ಚುನಾವಣಾ ಆಯೋಗವು ಏಕಪಕ್ಷೀಯ ವಾಗಿ ಅಧಿಕಾರ ಚಲಾವಣೆ ಮಾಡುತ್ತಿರಲಿಲ್ಲ . ಮತ್ತು ಸಾರ್ವಜನಿಕ ನೀತಿಯ ಕುರಿತು ಯಾವುದೇ ಬದಲಾವಣೆ ಮಾಡುವ ಮುಂಚೆ ಸಮಾಲೋಚನೆ ಪತ್ರವನ್ನು ಜನರ ಮುಂದೆ ಇಡುತಿತ್ತು. ಆದ್ದರಿಂದ ಅದರ ಮೇಲೆ ಭರವಸೆ ಉಂಟಾಯಿತು. ಅದರ ಪರಿಣಾಮವಾಗಿ ರಾಜಕೀಯ ಪಕ್ಷಗಳಲ್ಲಿ ಮಧ್ಯಸ್ಥಿಕೆ ವಹಿಸಲು ಆರೋಗ್ಯಕರ ವಾದ ಪೂರ್ವನಿರ್ದೇಶನ ಸ್ಥಾಪಿತವಾಗುತ್ತಿತ್ತು.
ಚುನಾವಣಾ ಆಯೋಗದ ಅಧಿಕಾರಿಗಳೊಂದಿಗೆ ಸಂವಿಧಾನದ ವಿಧಿ 324ರಲ್ಲಿ ವಿಧಿಸಲಾದ ಅಧಿಕಾರ ಉಪಯೋಗಿಸಿ ಮತ್ತು ತಕ್ಷಣ ಈ ತಿದ್ದುಪಡಿ ಯನ್ನು ಹಿಂತೆಗೆದುಕೊಳ್ಳಬೇಕು. ಭವಿಷ್ಯದಲ್ಲಿ ಎಲ್ಲಾ ಮುಖ್ಯ ರಾಜಕೀಯ ಪಕ್ಷಗಳ ರಾಷ್ಟ್ರೀಯ ನಾಯಕರೊಡನೆ ಸಮಾಲೋಚನೆ ನಡೆಸಿ ಸ್ವಾತಂತ್ರ ಮತ್ತು ನ್ಯಾಯಬಧ್ಧವಾದ ಚುನಾವಣಾ ನಿರ್ವಹಣೆ ನಡೆಯುವುದನ್ನು ಭದ್ರಪಡಿಸಬೇಕೆಂದು ಒತ್ತಾಯಿಸಿದ್ದಾರೆ.