ಬೆಳ್ತಂಗಡಿ (www.vknews.com) : ಸಮಸ್ತ ವಿಧ್ಯಾರ್ಥಿ ಸಂಘಟನೆ ಎಸ್ ಕೆ ಎಸ್ ಎಸ್ ಎಫ್ ಬೆಳ್ತಂಗಡಿ ವಲಯ ಇದರ ಸಾಮಾಜಿಕ ಸೇವಾ ಉಪ ಸಮೀತಿಯಾದ ವಿಖಾಯ ಸಮೀತಿಯ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಜಾರಿಗೆಬೈಲ್ ಸಮಸ್ತ ಮದರಸದಲ್ಲಿ ನಡೆದ ವಿಖಾಯ ಮಹಾಸಭೆಯಲ್ಲಿ ನಡೆಯಿತು.
SKSSF ಬೆಳ್ತಂಗಡಿ ವಲಯ ಅಧ್ಯಕ್ಷರಾದ ನಝೀರ್ ಅಝ್ಹರೀ ಅಧ್ಯಕ್ಷತೆ ವಹಿಸಿ ಕೊರೋಣ ಸಂಧರ್ಭ ಪಾಲಿಸಬೇಕಾದ ಕ್ರಮಗಳ ಬಗ್ಗೆ ಮತ್ತು ಪ್ರವಾಹ ಮತ್ತು ಇತರ ಅನಿವಾರ್ಯ ಸಂಧರ್ಭಗಳಲ್ಲಿ ಸಮಾಜಕ್ಕೆ ನೀಡಬಹುದಾದ ಸೇವೆಗಳ ಬಗ್ಗೆ ವಿವರಿಸಿ ಈ ನಿಟ್ಟಿನಲ್ಲಿ ವಿಖಾಯ ತಂಡ ಮಾಡುತ್ತಿರುವ ಸೇವೆಯೂ ಶ್ಲಾಘನೀಯ ಎಂದರು.
ಜಿಲ್ಲಾ ಕೋಶಾಧಿಕಾರಿ ಹನೀಫ್ ದೂಮಳಿಕೆ ಪ್ರಸ್ತಾವಿಕ ಮಾತಾನಾಡಿದರು. ಜಿಲ್ಲಾ ವಿಖಾಯ ಚೆಯರ್ಮನ್ ಇಸ್ಮಾಯಿಲ್ ತಂಙಳ್ ಕಾರ್ಯಕ್ರಮ ಉಧ್ಘಾಟಿಸಿ ವಿಖಾಯ ಸದಸ್ಯರಿಗೆ ಕೋವಿಡ್ ಕುರಿತು ಮಾಹಿತಿಯನ್ನು ನೀಡಿದರು.ವಿಖಾಯ ಕಾರ್ಯದರ್ಶಿ ಆಸಿಫ್ ಕಬಕ ಮತ್ತು ಕೋರ್ಡಿನೇಟರ್ ಮುಸ್ತಫಾ ಕಟ್ಟದಪಡ್ಪು ವಿಖಾಯ ಸದಸ್ಯರಿಗೆ ಕೋವಿಡ್ ದಫನ ಬಗ್ಗೆ ತರಬೇತಿ ನೀಡಿದರು.ನಂತರ ವಲಯ ವಿಖಾಯ ತಂಡದ ನೂತನ ಪಧಾದಿಕಾರಿಗಳ ಆಯ್ಕೆ ನಡೆಯಿತು.
ಚೆಯರ್ಮನ್ ಅಬ್ದುರ್ರಝಾಕ್ ಕಕ್ಕಿಂಜೆ,ಕಾರ್ಯದರ್ಶಿ ಶಕೀಲ್ ಅರೆಕ್ಕಲ್,ಜನರಲ್ ಕನ್ವೀನರ್ ಅಬೂಬಕರ್ ಬಂಗೇರುಕಟ್ಟೆ, ವೈಸ್ ಚೆಯರ್ಮನ್ ನಝೀರ್ ಕುದ್ರಡ್ಕ,ವೈಸ್ ಕನ್ವೀನರ್ ಶಿಹಾಬುಧ್ಧೀನ್ ಬೆಳ್ತಂಗಡಿ,ಕೋಶಾಧಿಕಾರಿ ಅಬ್ದುರಹ್ಮಾನ್ ಬಂಗೇರುಕಟ್ಟೆ,ವರ್ಕಿಂಗ್ ಕಾರ್ಯದರ್ಶಿಯಾಗಿ ಮುಸ್ತಫಾ ಸೋಮಂತಡ್ಕ,ಕಾರ್ಯಕಾರಿ ಸದಸ್ಯರಾಗಿ ಉಸ್ಮಾನ್ ಸವಣಾಲ್,ರಝಾಕ್ ಬರೆಮೇಲ್,ಇಕ್ಬಾಲ್ ಬಂಗೇರುಕಟ್ಟೆ ಕಾರ್ಯಕಾರಿ ಸದಸ್ಯರು ಮತ್ತು ಮೂವತ್ತು ಇತರ ಸದಸ್ಯರನ್ನು ನೇಮಕ ಮಾಡಲಾಯಿತು.ವಲಯ ಕೋಶಾಧಿಕಾರಿ ಹಕೀಂ ಬಂಗೇರುಕಟ್ಟೆ,ಜಾರಿಗೆಬೈಲ್ ಮದರಸ ಅಧ್ಯಕ್ಷರಾದ ಲತೀಫ್ ಜಾರಿಗೆಬೈಲು,ಕಕ್ಕಿಂಜೆ ಕ್ಲಷ್ಟರ್ ಅಧ್ಯಕ್ಷ ಝುಬೈರ್ ಬಂಡಸಾಲೆ,ಮಡಂತ್ಯಾರ್ ಕ್ಲಷ್ಟರ್ ಉಪಾಧ್ಯಕ್ಷರಾದ ಅಬೂಸಾಲಿ ಎನ್ ಸಿ ರೋಡ್, ನೌಫಲ್ ಜಾರಿಗೆಬೈಲು,ಉಪಸ್ಥಿತರಿದ್ದರು.
ಬೆಳ್ತಂಗಡಿ ಕ್ಲಷ್ಟರ್ ಅಧ್ಯಕ್ಷರಾದ ರಝಾಕ್ ಮುಸ್ಲಿಯಾರ್ ಗೇರುಕಟ್ಟೆ ಸ್ವಾಗತಿಸಿದರು.ಸಿರಾಜುಧ್ಧಿನ್ ಫೈಝಿ ಚಾರ್ಮಾಡಿ ವಂದಿಸಿದರು.