ಹಾಸ ಎಂಬದು ಹಾಸ್ಯ ನಗುವಿನಲಿ ಅಡಗಿದೆ ಲಾಸ್ಯ (ಲೇಖನ)

(www.vknews.com) :“ಹುಸಿ ನಗುತ ಬಂದೇವ ನಸು ನಗುತ ಬಾಳೋಣ ನಗುತ ತೆರಳೋಣ ಬ್ಯಾಡನೂರು ವರಪಾನ ಹರಷಾದಿ ಕಳೆಯೋಣ ಯಾಕಾರೆ ಕೇರಳೋಣ ” ಮನುಷ್ಯ ಹುಟ್ಟುವಾಗ ಸುಖ ದುಃಖ ಎರಡನ್ನು ತರುತ್ತಾನೆ. ಸುಖವಾದಾಗ ನಗುಬೇಕು ಆ ನಗು ಕಷ್ಟವನ್ನು ನಿಬಾಯಿಸಬೇಕು, ಸುಖದ ಬಾಳ್ವೆಯ ನಡುವೆ ಸಂತೋಷ ಇದ್ದಾಗ ನಗು ಬರುತ್ತದೆ. ಆ ನಗುವೇ ಹಾಸ್ಯದ ಸೋಪಾನವಾಗುತ್ತದೆ. ಹಾಸ್ಯದ ಮೂಲಕ ನೋವನ್ನು ಮರೆಮಾಚುವ ಹಾಸ್ಯಭರಿತ ಜೀವನವೇ ಸುಂದರ ಜೀವನವಾಗುತ್ತದೆ.

“ಹಾಸ್ಯವಿಲ್ಲದ ಜೀವನ ಹೂವಿಲ್ಲದ ಹೂದೋಟ, ನೀರಿಲ್ಲದ ಸರೋವರವಂತೆ” ಇದು ಕವಿ ವಾಣಿಯಾದರು ಇಲ್ಲಿ ಸಮಂಜಸವಾಗುತ್ತದೆ. ಈ ಹಾಸ್ಯ ಎಲ್ಲಿ ಹುಟ್ಟಿಕೊಳ್ಳುವುದು ಎಂದರೆ ನಮ್ಮಲ್ಲೇ ಹುಟ್ಟುಕೊಳ್ಳುತ್ತದೆ. ಕಾರಣ ತನ್ನ ಸಂತೋಷವಾದಾಗ ಆ ನಗುವೇ ಹಾಸ್ಯವಾಗುತ್ತದೆ. ಹಾಸ್ಯಕ್ಕೆ ಮೂಲವೇ ನಗು ಆ ನಗು ಹುಟ್ಟುವುದೇ ಸುಖ ಸಂತೋಷದಿಂದ ಇರುವಾಗ ಮಾತ್ರ. ಕೋಪದಿಂದ ಇರುವಾಗ ಹೆಚ್ಚಾಗಿ ನಗು ಹುಟ್ಟಿಕೊಳ್ಳುತ್ತದೆ ನಿಜ. ಆದರೆ ಆ ನಗು ವಿಕಾರ ನಗುವಾಗುತ್ತದೆ. ಅದು ಕ್ರೋಧ ಬರಿತ ಅಟ್ಟಹಾಸದ ನಗುವಾಗುತ್ತದೆ. ಇನ್ನೊಬ್ಬರಿಗೆ ನೋವು, ಹತಾಶೆ ಉಂಟು ಮಾಡುತ್ತದೆ. ದೇವತೆಗಳು ಆಸ್ಥಾನದಲ್ಲಿ ದೇವದೂತರು, ಯಮಧರ್ಮರಾಯನ ಆಸ್ಥಾನದಲ್ಲಿ ಚಿತ್ರಗುಪ್ತ ಹೀಗೆ ಮುಂತಾದ ದೇವತೆಗಳು ಹಾಸ್ಯದ ನಗುವನ್ನು ಬೀರುತ್ತಿದ್ದರು. ಹಿಂದಿನ ಕಾಲದಲ್ಲಿ ರಾಜ ಮಹಾರಾಜ ಕಾಲದಲ್ಲಿ ವಿಕಟ ಕವಿ, ಅಥವಾ ಹಾಸ್ಯಗಾರರು ಇರುತ್ತಿದ್ದರು. ಇವರು ತಮ್ಮ ಹಾಸ್ಯದ ಮಾತುಗಳಿಂದ ಮಹಾರಾಜರನ್ನು ಸಂತೋಷಗೊಳಿಸುತ್ತಿದ್ದರು. ಕೃಷ್ಣದೇವರಾಯ-ತೆನಾಲಿರಾಮ, ಅಕ್ಬರ-ಬೀರಬಲ್, ಮುಂತಾದವರು ವಿಕಟ ಕವಿ ಅಥವಾ ಹಾಸ್ಯ ರಸಗಳು ಮಾಡಿ ಮಹಾರಾಜರನ್ನು ಸಭಿಕರನ್ನು ನಗಿಸುತ್ತಿದ್ದರು. ಹೀಗೆ ಅವರೊಳಗಿದ್ದ ಸಂತೋಷವನ್ನು ಹೊರಗೆ ಹಾಕಿ ತಾವು ದುಃಖದಲ್ಲಿದ್ದರೂ ಇನ್ನೊಬ್ಬರನ್ನು ನಗಿಸುವವನೇ ಹಾಸ್ಯಗಾರ ಎಂದು ಕರೆಯುತ್ತಿದ್ದರು.

“ಹಾಸ್ಯವಿಲ್ಲದ ಬಾಳು ದೇವರಿಲ್ಲದ ದೇಗುಲದಂತೆ ದೀಪ್ತಿ ಇಲ್ಲದ ದೀವಿಗೆಯಂತೆ, ಕಪ್ಪು ಮೋಡ ತುಂಬಿದ ಜೀವನಾಕಾಶದಲಿ ಹಾಸ್ಯವು ಬೆಳ್ಳಿ ಬೆಳಕಾದಂತೆ, ಹಾಸ್ಯದಿಂದ ಮನಸ್ಸು ಪ್ರಫುಲ್ಲ ಗೊಳ್ಳುತ್ತದೆ. ಸುತ್ತಲಿನ ಜೀವನವು ಅರಳಿ ನಕ್ಕು ನಲಿಯುದುಂಟು, ಅದರ ಒಳ ತಿರುಳು ಆನಂದ” ಹೀಗೆ ಅನಕೃ ಅವರು ಕವಿತೆಯಲ್ಲಿ ಬಹಳ ಸೊಗಸಾಗಿ ರಚಿಸಿದ್ದಾರೆ. ಎಲ್ಲಿ ಹಾಸ್ಯವಿದೆಯೋ ಅಲ್ಲಿ ನಗುವಿದೆ, ಇಲ್ಲಿ ಆನಂದ ಇರುತ್ತದೆ. ಆನಂದವು ಮನುಷ್ಯ ಬದುಕಿನ ನೆಮ್ಮದಿಯನ್ನು ಉಂಟುಮಾಡುತ್ತದೆ. ಸಂತೋಷ ಆನಂದ, ನೆಮ್ಮದಿ, ಇವು ವ್ಯಕ್ತಿಯ ಮಾನಸಿಕ ಅಂತರಂಗ ಖುಷಿಕೊಡುತ್ತದೆ. ನಗು ವ್ಯಕ್ತಿಯ ಬಾಹ್ಯ ಸ್ವರೂಪದಲ್ಲಿ ಅಂತರಂಗದ ಅಥವಾ ಮನಸಿಗೆ ಮುದನೀಡುತ್ತದೆ.

ಒಂದು ಘಟನೆಯ ಅಥವಾ ವ್ಯಕ್ತಿಗಳಲ್ಲಿ ಹಾಸ್ಯಕ್ಕೆ ಕಾರಣವಾಗಬಲ್ಲ ಹಾಸ ಎಂಬ ಮನೋ ಸ್ಥಾಯಿ ಬಾವ ಮೂಲದಲ್ಲಿ ಉಂಟಾಗುವತ್ತದೆ. ಅದರ ಹಾಸ ಪ್ರತಿಕ್ರೀಯೆ ಪ್ರಚೋದಿಸುವ ಘಟನೆಗಳನ್ನು ನಿರ್ಮಾಣವಾದಾಗ ಹಾಸ್ಯರಸ ಬರುತ್ತದೆ. ಆ ಹಾಸ್ಯರಸದ ಪ್ರತಿಕ್ರಿಯೆ ನಗು ಪರಿಣಾಮ ಆನಂದ. ಆದುದರಿಂದ ಈ ಮೇಲಿನ ಎರಡು ಸನ್ನಿವೇಶವನ್ನು ಹಾಸ್ಯರಸದಲ್ಲಿ ವಿಂಗಡಿಸಬಹುದಾಗಿದೆ. ಅದು ಸಹಜ ಘಟನೆಗಳು/ನಿಜಜೀವನದ ಘಟನೆಗಳು-ರಂಗ ಪ್ರದರ್ಶನದ ಘಟನೆಗಳು.

ಹೀಗೆ ನಗುವಿನಲ್ಲಿ ಅಟ್ಟಹಾಸ ನಗು, ವಿಕಟ ನಗು, ಕುಹಕ ನಗು, ಕೃತಕ ನಗು, ಹುಸಿ ನಗು, ಮಂದಹಾಸ, ಪಾತಾಳ ನಗು, ಆಕಾಶ ನಗು, ಮೀಸೆ ಮರೆಯ ನಗು, ಮೂಗಿನ ನಗು,ಮುಂತಾದವು ಇದೆ. ಈ ಹಾಸ್ಯದ ಸನ್ನಿವೇಶಗಳು- ಸಹಜ ಘಟನೆ ಮತ್ತು ರಂಗ ಪ್ರವೇಶದ ಘಟನೆ ಎಂಬ ಎರಡು ವಿಧಾನಗಳಿವೆ. ಸಹಜ ಘಟನೆಗಳು ಏನಾದರೆ ನಿಜ ಜೀವನದಲ್ಲಿ ನಗುವಿಗೆ ಅನೇಕ ಕಾರಣವಾಗುವ ಸನ್ನಿವೇಶಗಳು ಸಹಜವಾಗಿ ಬರುವುದು. ನಾವು ಅಲಂಕಾರ ಮಾಡಿ ಕೊಂಡಾಗ ನಮ್ಮನ್ನೇ ನಾವು ನೋಡಿ ನಗುವುದು. ಇದು ಸಹಜ ನಗುವಾಗುತ್ತದೆ. ಅಲ್ಲದೆ ನಾವು ಇನ್ನೊಬ್ಬರನ್ನು ನೋಡಿ ಸಹಜ ಘಟನೆಯನ್ನು ರಂಗದಲ್ಲಿ ಅಭಿನಯಿಸಿ ಪ್ರೇಕ್ಷಕರಿಗೆ ತನ್ನ ಪಾತ್ರದ ಮೂಲಕ ನಗುವನ್ನು ಸೃಷ್ಠಿ ಮಾಡುವನು ಹಾಸ್ಯಗಾರ, ಆ ಹಾಸ್ಯವನ್ನೇ ನೋಡಿ ನಗುವುದೇ. ಒಂದು ನಗುವಾಗುತ್ತದೆ. ಈ ರಂಗ ಪ್ರದರ್ಶನದಲ್ಲಿ ಎರಡು ವಿಧಗಳಿವೆ. ನಾಟಕ -ಬಯಲಾಟ. ಈ ಬಯಲಾಟದಲ್ಲಿ ಮೂರೂ ವಿಧಗಳು ಗೊಂಬೆಯಾಟ-ಯಕ್ಷಗಾನ – ತಾಳಮದ್ದಳೆ . ಹೀಗೆ ಈ ಮೂರೂ ಪ್ರಕಾರಗಳಲ್ಲಿ ವಿನೋದಕ್ಕಾಗಿಯೋ, ಕಥೆಯ ನಾಯಕನ ಒಟ್ಟಿಗೆ ಗೆಳೆಯನಾಗಿಯೋ, ರಾಜನ ಪ್ರತಿನಿಧಿಯಾಗಿಯೋ, ಕಥೆಯ ಒಂದಕ್ಕೊಂದು ಸಂಬಂಧ ಹೆಣೆಯುವಲ್ಲಿ ಹಾಸ್ಯಗಾರನ ಪಾತ್ರ ಬಹು ಮುಖ್ಯವಾಗುತ್ತದೆ. ಕೆಲವು ಸಂದರ್ಭದಲ್ಲಿ ರಾಜಹಾಸ್ಯ, ಕೆಲವು ಸಂದರ್ಭದಲ್ಲಿ ವಿಕಟ ಹಾಸ್ಯ, ದೂತ ಹಾಸ್ಯ ಹೀಗೆ ಆಯಾಯ ಸಂದರ್ಭದಲ್ಲಿ ಹಾಸ್ಯಗಾರರ ಪಾತ್ರವನ್ನು ಕಥೆಗಾರರು ಸೃಷ್ಟಿಯಾಗುತ್ತದೆ.

ಈ ರೀತಿಯಲ್ಲಿ ನಗು ಜೀವನದ ಆರೋಗ್ಯವನ್ನು ಸಹ ಸಮತೋಲನ ಕಾಪಾಡುತ್ತದೆ. ನಾವು ಹಾಸ್ಯದ ಪ್ರತಿಕ್ರಿಯೆಗೆ ನಗುತ್ತೇವೆ. ಆ ನಗು ವಯ್ಕಿಯ ಮನಸ್ಸಿಗೆ ಸಂತೋಷ ಮಾತ್ರವಲ್ಲದೆ, ದೇಹದ ನರ ನಾಡಿಗಳ ರಕ್ತಸಂಚಲನಗಳು ಕ್ರಮಮಟ್ಟಗಿರುವುದರಿಂದ ಮಾನವನ ಶರೀರದ ಆರೋಗ್ಯವನ್ನು ಸಹ ನೀಡುತ್ತದೆ ಇದು ವ್ಯೆದ್ಯರು ಒಪ್ಪಿಕೊಂಡ ಸತ್ಯವಾಗಿದೆ. ಹೀಗೆ ಜೀವನದ ಲಾಸ್ಯವನ್ನು ಹಾಸ್ಯದಿಂದ ಕಳೆಯಬಹುದಾಗಿದೆ.

✍️ ಲೇಖಕರು ಚಾರ ಪ್ರದೀಪ ಹೆಬ್ಬಾರ್

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...