ಕಲಾ ವಿಭಾಗದ ಫಾತಿಮತ್ ನಿಶಾ 558
ವಾಣಿಜ್ಯ ವಿಭಾಗದ ಝೈತುನ್ನೀಸಾ 551
ವಿಜ್ಞಾನ ವಿಭಾಗದ ಝೈನಬಾ ಅಫ್ರತ್ 540
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : 2019-20ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶೇ. 95 ಫಲಿತಾಂಶ ದಾಖಲಿಸಿದ್ದಾರೆ. ಒಟ್ಟು 140 ಮಂದಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರು.
24 ಮಂದಿ ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ, 94 ಮಂದಿ ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ ಹಾಗೂ ಇತರರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕಲಾ ವಿಭಾಗದ ಫಾತಿಮತ್ ನಿಶಾ 558, ವಾಣಿಜ್ಯ ವಿಭಾಗದ ಝೈತುನ್ನೀಸಾ 551 ಹಾಗೂ ವಿಜ್ಞಾನ ವಿಭಾಗದ ಝೈನಬಾ ಅಫ್ರತ್ 540 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನಿಗಳಾಗಿ ಹೊರಹೊಮ್ಮಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.