ದ್ವಿತೀಯ ಪಿಯುಸಿ ಫಲಿತಾಂಶ: 583 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಸುಳ್ಯದ ಮರಿಯಮ್ ರಫಾನ

ಸುಳ್ಯ(www.vknews.in): ಇಲ್ಲಿನ ಕೆ.ವಿ.ಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮರಿಯಮ್ ರಫ್ಹಾನಾ 583 (97.11 ಶೇ.) ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕಾಲೇಜಿಗೆ ಪ್ರಥಮ ಸ್ಥಾನಿ ಆಗಿದ್ದಾರೆ. ಪಿಸಿಎಂಬಿ ಯಲ್ಲಿ 393 ಅಂಕ ಗಳಿಸಿ 98.25 ಶೇ. ಫಲಿತಾಂಶ ದಾಖಲಿಸಿದ್ದಾಳೆ.


ಫಿಸಿಕ್ಸ್ ಮತ್ತು ಮ್ಯಾಥಮೆಟಿಕ್ಸ್ ನಲ್ಲಿ ತಲಾ 100ಕ್ಕೆ 100 ಅಂಕ, ಇಂಗ್ಲಿಷ್ ನಲ್ಲಿ 95, ಹಿಂದಿಯಲ್ಲಿ 95, ಕೆಮಿಸ್ಟ್ರಿಯಲ್ಲಿ 98, ಬಯೋಲಜಿಯಲ್ಲಿ 95 ಅಂಕಗಳನ್ನು ಪಡೆದಿದ್ದಾರೆ. ರಫ್ಹಾನಾ ಸುಳ್ಯ ಕೆರೆಮೂಲೆ ನಿವಾಸಿ ಹಾಜಿ ಅಬ್ದುರ್ರಹ್ಮಾನ್ (ವಾಚ್ ಬಾಬಚ್ಚ) ಹಾಗೂ ಝೊಹರಾ ದಂಪತಿಯ ಪುತ್ರಿ.

ಎಸ್ಸೆಸ್ಸೆಲ್ಸಿಯಲ್ಲಿ ಮರಿಯಮ್ ರಫ್ಹಾನಾ 607 ಅಂಕ ದಾಖಲಿಸಿದ್ದರು. ಇವರು ಮುಂದೆ ವೈದ್ಯಕೀಯ ಶಿಕ್ಷಣ ಮಾಡುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...