ಜೆದ್ದಾ(www.vknews.in): ಕಳೆದ ಮೂರು ತಿಂಗಳಿನಿಂದ ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ‘ಆರೆಂಜ್’ ವಲಯದಲ್ಲಿದ್ದ ಸೌದಿ ಅರೇಬಿಯಾವು ಇದೀಗ ‘ಹಳದಿ’ ವಲಯದಲ್ಲಿ ಸ್ಥಾನ ಪಡೆದಿದೆ. ದಿನನಿತ್ಯದ ಕೊವಿಡ್ ಪ್ರಕರಣಗಳಲ್ಲಿ ಇಳಿಕೆ ಹಾಗೂ ರೋಗಮುಕ್ತಿ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದು, ದೈನಂದಿನ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳ ತೊಡಗಿದೆ. ಇಂದು ಸೌದಿ ಅರೇಬಿಯಾದಲ್ಲಿ 2504 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದ್ದು, ಇದು ಕಳೆದೆರೆಡು ತಿಂಗಳಿನಿಂದ ಮರುಭೂಮಿಯಲ್ಲಿ ದಾಖಲಾದ ದಿನವೊಂದರ ಅತೀ ಕಡಿಮೆ ಕೊವಿಡ್ ಪ್ರಕರಣವಾಗಿದೆ. ಮಾತ್ರವಲ್ಲದೇ ರೋಗಮುಕ್ತಿ ಹೊಂದಿದವರ ಸಂಖ್ಯೆಯಲ್ಲಿಯೂ ಕೂಡ ವೃದ್ಧಿ ಕಾಣಿಸಿದ್ದು, ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ 3517 ರೋಗಮುಕ್ತಿ ಹಾಗೂ 39 ಮರಣ ದಾಖಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.