ಸೌದಿ ಅರೇಬಿಯಾ: ಎರಡು ತಿಂಗಳ ಬಳಿಕ ಕನಿಷ್ಠ ಸಂಖ್ಯೆಯ ಕೊವಿಡ್ ಪ್ರಕರಣ ದಾಖಲು; ಇಂದು 2344 ಪ್ರಕರಣಗಳು, 5400 ರೋಗಮುಕ್ತಿ
ಜೆದ್ದಾ(www.vknews.in): ಲಾಕ್ ಡೌನ್ ನಂತರ ಮರುಭೂಮಿ ನಾಡು ಸಹಜ ಸ್ಥಿತಿಗೆ ಮರಳ ತೊಡಗಿದ್ದು, ಎರಡು ತಿಂಗಳ ಬಳಿಕ ಪ್ರಪ್ರಥಮ ಬಾರಿಗೆ ದಿನವೊಂದರ ಕನಿಷ್ಠ ಸಂಖ್ಯೆಯ ಕೊವಿಡ್ ಪ್ರಕರಣಗಳು ದಾಖಲಾಗಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ ಸೌದಿಯಲ್ಲಿ 2300 ಹೊಸ ಕೊವಿಡ್ ಪ್ರಕರಣಗಳು, 3400 ರೋಗಮುಕ್ತಿ ಹಾಗೂ 34 ಬಲಿಗಳು ದಾಖಲಾಗಿದೆ. ಇದುವರೆಗೂ ಪತ್ತೆಯಾದ ಒಟ್ಟು 256987 ಕೊವಿಡ್ ಸೋಂಕಿತರ ಪೈಕಿ 187909 ಮಂದಿ ಗುಣಮುಖರಾಗಿದ್ದು, ಪ್ರಸ್ತುತ 56099 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆೆ. ಇವರಲ್ಲಿ 2199 ಮಂದಿಯ ಸ್ಥಿತಿ ಚಿಂತಾಜನಕವಾಗಿದೆೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.