ಸರಿ ಸುಮಾರು 13 ವರ್ಷಗಳ ನಂತರ ಯುವಿ ದಾಖಲೆ ಸರಿದೂಗಿಸಿದ ಬಜ್ಪೆ ಮೂಲದ ಮುನವ್ವರ್

(www.vknews.com) : ಹರದ್ – ಭಾರತ ತಂಡದ ಎಡಗೈ ದಾಂಡಿಗ ಯುವರಾಜ್ ಸಿಂಗ್ 2007 ರಲ್ಲಿ ಇಂಗ್ಲೆಂಡ್ ವಿರುದ್ಧ ಟಿಟ್ವೆಂಟಿ ಪಂದ್ಯದಲ್ಲಿ ಕೇವಲ 12 ಬಾಲ್ ಗಳಲ್ಲಿ 50 ಭಾರಿಸಿದ ವಿಶ್ವದ ಮೊದಲ ಆಟಗಾರನೆನಿಸಿಕೊಂಡಿದ್ದರು.

ಮಂಗಳೂರು ಸ್ಟ್ರೆಕರ್ಸ್ ಹಾಗೂ ಎ.ಎಮ್.ಇ ಚಾಲೆಂಜರ್ಸ್ ನಡುವೆ ಹರದ್ ನ ಸೋಯಿಲ್ ಫೀಲ್ಡ್ ಮೈದಾನದಲ್ಲಿ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ 6 ನೇ ಕ್ರಮಾಂಕದಲ್ಲಿ ಬ್ಯಾಂಟಿಂಗ್ ಗೆ ಬಂದ ಬಜ್ಪೆಯ ಮುನವ್ವರ್ ಯಾನೆ ಮುನ್ನ 12 ಎಸೆತಗಳಲ್ಲಿ 50 ರನ್ ಭಾರಿಸಿ ಯುವಿ ದಾಖಲೆಯನ್ನು ನೆನಪಿಸಿದರು. ಇಫ್ತಿಕಾರ್ ಎಸೆದ 5 ನೇ ಒವರಿನಲ್ಲಿ 5 ಸಿಕ್ಸರ್ ಮತ್ತು 2 ಬೌಂಡರಿಯೊಂದಿಗೆ 40 ರನ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದರು ಇದರಲ್ಲಿ ಒಂದು ನೋ ಬಾಲ್ ಸಿಕ್ಸರ್ ಸೇರಿತು. ಬೌಲರ್ಗಳನ್ನು ತನಗೆ ಮನಬಂದಂತೆ ದಂಡಿಸಿ ತಾನೆದುರಿಸಿದ ಒಟ್ಟು 18 ಎಸೆತಗಳಲ್ಲಿ 9 ಸಿಕ್ 3 ಬೌಂಡರಿ ಸೇರಿ 73 ರನ್ ಗಳಿಸಿ ಔಟಾಗದೆ ಉಳಿದರು.

ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಭಾರಿಸಿದ ಮುನವ್ವರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಪಂದ್ಯದಲ್ಲಿ ಮಂಗಳೂರು ಸ್ಟ್ರೆಕರ್ಸ್ 26 ರನ್ಗಳಿಂದ ಗೆದ್ದುಕೊಂಡಿತು.

ವರದಿ : ಹರದ್ ಅಪ್ಡೇಟ್ಸ್

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...