ಜೆದ್ದಾ(www.vknews.in): ಕಳೆದೆರಡು ವಾರಗಳಿಂದ ಸೌದಿ ಅರೇಬಿಯಾದಲ್ಲಿ ಕೊವಿಡ್ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆ ಕಂಡು ಬರುತ್ತಿದೆ. ಸಾವಿರದ ಆಸುಪಾಸಿನಲ್ಲಿ ದಾಖಲಾಗುತ್ತಿದ್ದ ದೈನಂದಿನ ಕೊವಿಡ್ ಪ್ರಕರಣಗಳ ಪ್ರಮಾಣ ಇದೀಗ 687ಕ್ಕೆ ಇಳಿದಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ 935 ರೋಗಮುಕ್ತಿ ದಾಖಲಾಗಿದೆೆ. ಇದರೊಂದಿಗೆ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 324407 ಹಾಗೂ ರೋಗ ಮುಕ್ತಿ ಸಂಖ್ಯೆ 300933 ಕ್ಕೆ ಏರಿಕೆಯಾಗಿದೆ. ಇಂದು 24 ಬಲಿಗಳು ದಾಖಲಾಗುವುದರೊಂದಿಗೆ ಒಟ್ಟು ಕೊವಿಡ್ ಬಲಿಗಳ ಸಂಖ್ಯೆ 4213ಕ್ಕೆ ಏರಿಕೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.