ರಿಯಾದ್(ವಿಶ್ವ ಕನ್ನಡಿಗ ನ್ಯೂಸ್): ಸೌದಿ ಅರೇಬಿಯಾ ತಾನು ನೆಲ-ಜಲ-ವಾಯು ಮಾರ್ಗವನ್ನು ತನ್ನ ದೇಶಕ್ಕೆ ಪ್ರಯಾಣಿಸುವವರಿಗೆ ಹಾಗು ದೇಶದಿಂದ ತೆರಳುವವರಿಗೆ ಕೊರೋನಾ ಸಂಬಂಧಿತ ಅಗತ್ಯ ಕ್ರಮಗಳನ್ನು ಕೈಗೊಂಡುಕೊಂಡೇ 2021 ರ ಜನವರಿಯಲ್ಲಿ ಮುಕ್ತವಾಗಿಸಲಿದೆ ಎಂದು ಸೌದಿ ಅರೇಬಿಯಾದ ಮಾಧ್ಯಮ ಸೌದಿ ಗಝೆಟ್ ವರದಿ ಮಾಡಿದೆ.
ಸೆಪ್ಟೆಂಬರ್ 15 ರ ಬಳಿಕ ತನ್ನ ದೇಶದ ನಾಗರಿಕರು-ಜಿಸಿಸಿ ಯ ಪ್ರಜೆಗಳು-ತನ್ನ ದೇಶದ ವೀಸಾ ಹೊಂದಿದವರು ಮರಳುವ ಅವಕಾಶವನ್ನೂ ಕಲ್ಪಿಸಿದೆ.ಇದಕ್ಕೆ 48 ಘಂಟೆಗಳ ಮೊದಲು ನಡೆಸಿದ ಕೊರೋನಾ ನೆಗೆಟಿವ್ ಫಲಿತಾಂಶ ಹಾಗು ಅಗತ್ಯ ಕೊರೋನಾ ಸಂಬಂಧಿತ ಕ್ರಮಗಳನ್ನು ಪಾಲಿಸಬೇಕಿದೆ.ಸೌದಿ ಸಚಿವಾಲಯದ ಮೂಲವನ್ನು ಉಲ್ಲೇಖಿಸಿ ಸೌದಿ ಪ್ರೆಸ್ ಏಜೆನ್ಸಿ ಈ ರೀತಿಯ ವರದಿ ಮಾಡಿದ್ದಾಗಿ ಸೌದಿ ಗಝೆಟ್ ತನ್ನ ಪೋಸ್ಟ್ ನಲ್ಲಿ ತಿಳಿಸಿದೆ.ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಹೇಳಿಕೆಗಾಗಿ ಕಾಯಲಾಗುತ್ತಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.