ಜೆದ್ದಾ(www.vknews.in): ಕಳೆದ ಮಾರ್ಚ್ ತಿಂಗಳ ಕೊರೊನಾ ವೈರಸ್ ಲಾಕ್ ಡೌನ್ ಬಳಿಕ ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಜೆದ್ದಾದಿಂದ ಕೇರಳದ ಕೋಝಿಕ್ಕೋಡ್ ಗೆ ಪ್ರಥಮ ವಿಮಾನ ಹಾರಾಟ ನಡೆಸಲಾಗುವುದೆಂದು ಸೌದಿ ಏರ್ ಲೈನ್ಸ್ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಸೌದಿ ಏರ್ ಲೈನ್ಸ್ ಏಳು ತಿಂಗಳ ವಿಮಾನ ಸ್ಥಗಿತ ಬಳಿಕದ ಸೌದಿಯಿಂದ ಭಾರತಕ್ಕೆ ನಡೆಸುವ ಪ್ರಥಮ ವಿಮಾನ ಹಾರಾಟ ಇದಾಗಿದೆ.
ಸೌದಿ ಏರ್ ಲೈನ್ಸ್ ಸಂಸ್ಥೆಯು ಪ್ರಕಟಿಸಿದ ವೇಳಾಪಟ್ಟಿಯಲ್ಲಿ ಸದ್ಯಕ್ಕೆ ಭಾರತದ ಕೋಝಿಕ್ಕೋಡ್ ಏರ್ ಪೋರ್ಟ್ ಮಾತ್ರ ಸೇರಿದ್ದು, ನವೆಂಬರ್ ನಲ್ಲಿ ಕೋಝಿಕ್ಕೋಡ್ ಜೊತೆಗೆ ಕೇರಳದ ಕೊಚ್ಚಿಗೂ ಕೂಡ ವಿಮಾನ ಹಾರಾಟ ನಡೆಸಲಿದೆಯೆಂದು ಸಂಸ್ಥೆ ಪ್ರಕಟಿಸಿದೆ . ಪ್ರಥಮ ಹಂತದಲ್ಲಿ ಸೌದಿ ಏರ್ ಲೈನ್ಸ್ ಜೆದ್ದಾದಿಂದ ಪ್ರತೀ ಗುರು, ಶುಕ್ರ ಹಾಗೂ ಆದಿತ್ಯವಾರದಂದು ಕೋಝಿಕ್ಕೋಡ್ ಗೆ ಹಾರಾಟ ನಡೆಸಲಿದೆ. ಈ ಮೇಲೆ ಪ್ರಕಟಿಸಿದ ದಿನಾಂಕ ಹಾಗೂ ಸಮಯಗಳು ಬದಲಾವಣೆಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.