ವರದಿ ನ್ಯೂಸ್ ಹೆಬ್ರಿ:-ಚಾರ ಮಹಿಷಮರ್ಧಿನಿ ಅಮ್ಮನವರಲ್ಲಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವ

ಸಹ್ಯಾದ್ರಿಯ ಕಾನನದ ತಪ್ಪಲು ಪರಶುರಾಮ ಸೃಷ್ಠಿಯ ಪುಣ್ಯಭೂಮಿ ಚಾರ ಶ್ರೀ ಮಹಾಗಣಪತಿ ಮತ್ತು ಮಹಿಷಮರ್ಧಿನಿ ಅಮ್ಮನವರ ಸನ್ನಿಧಿಯಲ್ಲಿ ನಡೆಯುವ ಆಶ್ವಿಜ  ಮಾಸ ಶುದ್ಧ ಶುಕ್ಲ ಪಕ್ಷದ ಶರನ್ನವರಾತ್ರಿಯಾರಂಭ  ದಿನಾಂಕ 17-10-2020ನೇ ಶನಿವಾರದಿಂದ  ದಿನಾಂಕ 25-10-2020ರ  ರವಿವಾರ  ವಿಜಯದಶಮಿ ಪರ್ಯಂತ ಶರನ್ನವರಾತ್ರಿ  ನಡೆಯುತ್ತದೆ. ಪ್ರತಿ ದಿನ ಹೂವಿನಪೂಜೆ, ಕುಂಕುಮಾರ್ಚಿನೆ, ದುರ್ಗಾ ಪಾರಾಯಣ, ಹರಿವಾಣ ನೈವೇಧ್ಯ, ಪಂಚಾಮೃತ ಅಭಿಷೇಕ, ಊರ ಪರವೂರ ಭಕ್ತಾದಿಗಳು ಸೇವೆ ಕೊಡಬಹುದಾಗಿದೆ.

ದಿನಾಂಕ 25-10-2020ನೇ ರವಿವಾರ  ವಿಜಯದಶಮಿಯಂದು ಶ್ರೀದೇವಿ ಸನ್ನಿಧಿಯಲ್ಲಿ ಬೆಳಿಗ್ಗೆ ಗಂಟೆ 9.00ರಿಂದ “ಸಾಮೂಹಿಕ ದುರ್ಗಾಯಾಗ”, ಸಂಜೆ 6.00 ಗಂಟೆಗೆ ಸರಿಯಾಗಿ ಶ್ರೀ ಮಹಿಷಮರ್ಧಿನೀ  ಮಹಿಳಾ ಭಜನಾ ಮಂಡಳಿ ಚಾರ ಇವರಿಂದ ಭಜನೆ, ಹಾಗು  ರಾತ್ರಿ 8.00 ಗಂಟೆಗೆ ಸರಿಯಾಗಿ “ಸಾಮೂಹಿಕ ರಂಗಪೂಜಾ ದೀಪೋತ್ಸವ” ನಡೆಯಲಿದೆ.  ಕೋವಿಡ್ -19 ನಿಯಮದ ಪ್ರಕಾರ ಕರೋನ ಮಹಾಮಾರಿ ರೋಗ ಇರುವುದರಿಂದ ವೃದ್ಧರು ಮತ್ತು ಮಕ್ಕಳು ಹಾಗು ಸದ್ಭಕ್ತರು ತಾವು ದೇಗುಲದಲ್ಲಿ ಸಾಮಾಜಿಕ ಅಂತರವನ್ನು ಕಾದುಕೊಂಡು ಪ್ರಸಾದ ತೆಗೆದುಕೊಳ್ಳಬೇಕಾಗಿ ಆಡಳಿತ ಅಧಿಕಾರಿಗಳು ವಿನಂತಿಸಿದ್ದಾರೆ.

ಸಾರ್ವಜನಿಕರು ಹಾಗು ದೇಗುಲದ ಸದ್ಭಕ್ತರು, ದೇಗುಲದ ತಂತ್ರಿಗಳು, ಅರ್ಚಕರು, ಪರಿಚಾರಕರು  ಭಾಗವಹಿಸುವರೇ  ಎಂದು ದೇವಸ್ಥಾನದ ಆಡಳಿತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೇವಸ್ಥಾನದ ಶರನ್ನವರಾತ್ರಿಯ  ಉತ್ಸವಾದಿ ಹಾಗು ಪೂಜಾ ಕಾರ್ಯಕ್ಕೆ ಯಾರಾದರೂ ಹೊರಗಿನ ಸದ್ಭಕ್ತರು ಧನ ಸಹಾಯ ನೀಡಲಿಚ್ಚಿಸುವರು  ಶ್ರೀ ದೇವಸ್ಥಾನದ ಉಳಿತಾಯ ಖಾತೆಯಾದ “ಶ್ರೀ ಮಹಿಷಮರ್ಧಿನಿ ದೇವಸ್ಥಾನ ಚಾರ” ಎಂಬ ಉಳಿತಾಯ ಖಾತೆ A/C No. 1782500100109901 IFSC code: KARB0000178 ಕರ್ನಾಟಕ ಬ್ಯಾಂಕ್ ಹೆಬ್ರಿ ಶಾಖೆಯಲ್ಲಿರುವ ಶ್ರೀ ದೇವಳ ಖಾತೆಗೆ ಜಮಾ ಮಾಡಬಹುದು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...