ಮಕ್ಕಾ: ಮಸ್ಜಿದುಲ್ ಹರಂ ನಲ್ಲಿ ಕ್ರಿಮಿನಾಶಕ ಔಷಧ ಸಿಂಪಡಣೆಗೆ ಸಜ್ಜಾದ ಸ್ವಯಂ ಚಾಲಿತ ರೊಬೋಟ್ ಗಳು

ಜೆದ್ದಾ(www.Vknews.in): ಮಕ್ಕಾದ ಪವಿತ್ರ ಮಸ್ಜಿದುಲ್ ಹರಂ ನ್ನು ಕೊವಿಡ್ ಮುಕ್ತಗೊಳಿಸುವ ಸಲುವಾಗಿ ದಿನಂಪ್ರತಿ ಕ್ರಿಮಿನಾಶಕ ಸಿಂಪಡಿಸಲು ಸ್ವಯಂಚಾಲಿತ ಮಾನವರಹಿತ ರೊಬೋಟ್ ಗಳು ಕಾರ್ಯ ನಿರ್ವಹಿಸಲಿವೆ. ಮಸ್ಜಿದುಲ್ ಹರಂ ನ ಇಮಾಂ ಶೈಖ್ ಅಬ್ದುರ್ರಹ್ಮಾನ್ ಸುದೈಸಿಯವರು ಈ ರೊಬೋಟ್ ಗಳನ್ನು ಉದ್ಘಾಟಿಸಿದರು. ದಿನಂಪ್ರತೀ ಮೂರು ಬಾರಿ ಈ ರೊಬೋಟ್ ಗಳು ಹರಂ ಪರಿಸರವನ್ನು ಕ್ರಿಮಿ ಮುಕ್ತಗೊಳಿಸಲಿದೆ.

ಅಕ್ಟೊಬರ್ 18ರಿಂದ ದಿನವೊಂದಕ್ಕೆ 65000 ಯಾತ್ರಾರ್ಥಿಗಳಿಗೆ ಉಮ್ರಾ ನಿರ್ವಹಿಸಲು ಸೌದಿ ಸರಕಾರವು ಅವಕಾಶ ನೀಡಲಿದ್ದು, ಯಾತ್ರಾರ್ಥಿಗಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ರೊಬೋಟ್ ಗಳನ್ನು ಕ್ರಿಮಿನಾಶಕ ಸಿಂಪಡಿಸಲು ಬಳಸಲಾಗುತ್ತಿದೆ ಎಂದು ಮಸ್ಜಿದುಲ್ ಹರಂ ಆಡಳಿತ ಸಮಿತಿಯು ತಿಳಿಸಿದೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...