ಈದ್ ಮಿಲಾದ್ ಆಚರಣೆಗೆ ಸರಕಾರದಿಂದ ಮಾರ್ಗಸೂಚಿ; ಈದ್ ಮೆರವಣಿಗೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ನಿಷೇಧ

ಬೆಂಗಳೂರು(www.vknews.in): ಮುಸ್ಲಿಂ ಬಾಂಧವರಿಂದ ಇದೇ ತಿಂಗಳಾಂತ್ಯದಲ್ಲಿ ಆಚರಿಸಲ್ಪಡುವ ಪ್ರವಾದಿ ಪೈಗಂಬರರ ಜನ್ಮದಿನ ಈದ್ ಮಿಲಾದ್ ಕಾರ್ಯಕ್ರಮಕ್ಕೆ ರಾಜ್ಯ ಸರಕಾರವು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೊವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಿಡುಗಡೆ ಮಾಡಿದ ಈ ಮಾರ್ಗಸೂಚಿಯಲ್ಲಿ ಈದ್ ಮಿಲಾದ್ ದಿನದಂದಿನ ಮೆರವಣಿಗೆ, ಸಾಂಸ್ಕ್ರತಿಕ ಕಾರ್ಯಕ್ರಮಗಳು ಹಾಗೂ ದಾರ್ಮಿಕ ಪ್ರವಚನಗಳನ್ನೂ ಕೂಡ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಆದರೆ ಮಸೀದಿಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಕೊವಿಡ್ ಪ್ರೊಟೊಕಾಲ್ ಪ್ರಕಾರ ನಡೆಸುವಂತೆ ನಿರ್ದೇಶಿಸಲಾಗಿದ್ದು, ತಪ್ಪಿದಲ್ಲಿ ಕಠಿನ ಕಾನೂನು ಕ್ರಮಗಳನ್ನು ಕೈಗೊಳ್ಳಲು ಆದೇಶಿಸಲಾಗಿದೆ.

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...