ಸುಳ್ಯದಲ್ಲಿ SSF ಬ್ಲಡ್ ಸೈಬೋದ 199ನೇ ರಕ್ತದಾನ ಶಿಬಿರ

ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ವತಿಯಿಂದ SSF ಬ್ಲಡ್ ಸೈಬೋದ 199ನೇ ರಕ್ತದಾನ ಶಿಬಿರ ಸುಳ್ಯ ಸುನ್ನಿ ಸೆಂಟರ್ ನಲ್ಲಿ ಅಕ್ಟೋಬರ್ 18ರಂದು ಜರಗಿತು. ದ.ಕ ಜಿಲ್ಲಾ ಸಖಾಫೀಸ್ ಕೌನ್ಸಿಲ್ ಉಪಾಧ್ಯಕ್ಷ ಬಶೀರ್ ಸಖಾಫಿ ಮೊಗರ್ಪಣೆ ದುಆ ಮಾಡಿ ಚಾಲನೆ ನೀಡಿದರು. ಶಿಬಿರದ ಸ್ವಾಗತ ಸಮಿತಿ ಚೇರ್ಮಾನ್ ಸಿದ್ದೀಖ್ ಕಟ್ಟೆಕಾರ್ ಅಧ್ಯಕ್ಷತೆ ವಹಿಸಿದರು.

ರಕ್ತದಾನಿಗಳಿಂದ 101 ಯುನಿಟ್ ರಕ್ತಗಳನ್ನು ಸಂಗ್ರಹಿಸಲಾಯಿತು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ರಕ್ತದಾನದಲ್ಲಿ ಕ್ರಾಂತಿ ಸೃಷ್ಠಿಸಿದ ಸುಧಾಕರ್ ರೈ ಮಾತನಾಡಿ ಬ್ಲಡ್ ಸೈಬೋದ ಮೂಲಕ ಎಸ್ಸೆಸ್ಸೆಫ್ ರಕ್ತದಾನದಲ್ಲಿ ಮಹತ್ವದ ಕ್ರಾಂತಿ ಮಾಡಿದೆ ಹಾಗೂ ಜಿಲ್ಲೆಯಲ್ಲಿ ರಕ್ತ ಪೂರೈಸುವವರಲ್ಲಿ ಎಸ್ಸೆಸ್ಸೆಫ್ ಮೊದಲಿಗಿದೆ ಎಂದು ಹೇಳಿ ಸಂತೋಷ ವ್ಯಕ್ತಪಡಿಸಿ ಶ್ಲಾಘಿಸಿದರು. ಎಸ್ಸೆಸ್ಸೆಫ್ ಬ್ಲಡ್ ಸೈಬೋ ಜಿಲ್ಲಾ ಚೇರ್ಮಾನ್ ತೌಸೀಫ್ ಸಅದಿ ಹರೇಕಳ ಪ್ರಾಸ್ತಾವಿಕ ಹಾಗೂ ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹ್ ಹಿಮಮಿ ಸಖಾಫಿ ಮುನ್ನುಡಿ ಭಾಷಣಗೈದರು.

ಎಸ್ಸೆಸ್ಸೆಫ್ ದ.ಕ ಈಸ್ಟ್ ಝೋನ್ ಅಧ್ಯಕ್ಷ ಅಯ್ಯೂಬ್ ಮಹ್ಳರಿ ಕಾವಲ್ಕಟ್ಟೆ, ಜಿಲ್ಲಾ ಬ್ಲಡ್ ಸೈಬೋ ಕೋರ್ಡಿನೇಟರ್ ಕರೀಂ ಕೆದ್ಕಾರ್, ನಗರ ಪಂಚಾಯತ್ ಸದಸ್ಯರಾದ ವೆಂಕಪ್ಪ ಗೌಡ, ಉಮರ್ ಕೆ.ಎಸ್, ಎಸ್ಡಿಪಿಐ ತಾಲೂಕು ಅಧ್ಯಕ್ಷ ಅಬ್ದುಲ್ ಕಲಾಂ ಆಶಂಸಾ ನುಡಿದರು.

ಎಸ್.ವೈಸ್ ನಾಯಕರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಲತೀಫ್ ಸಖಾಫಿ ಗೂನಡ್ಕ ಮುಸ್ಲಿಂ ಜಮಾಅತ್ ನಾಯಕ ಅಬ್ದುರ್ರಹ್ಮಾನ್ ಮೊಗರ್ಪಣೆ ಎಸ್ಸೆಸ್ಸೆಫ್ ನಾಯಕರಾದ ಜಿ.ಕೆ ಇಬ್ರಾಹಿಂ ಅಂಜದಿ, ಫೈಝಲ್ ಝುಹ್ರಿ, ಶಫೀಖ್ ಮಾಸ್ಟರ್ ತಿಂಗಳಾಡಿ, ಇಮ್ರಾನ್ ರೆಂಜಲಾಡಿ ಕೆ.ಸಿ.ಎಫ್ ನಾಯಕರಾದ ಸ್ವಾದಿಖ್ ಮೊಗರ್ಪಣೆ, ಕಬೀರ್ ಜಟ್ಟಿಪಳ್ಳ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮುಖ್ಯಸ್ಥ ಪ್ರಮೀಣ್ ಕುಮಾರ್, ಕೆ.ಎ 21 ಸುಳ್ಯ ಅಡ್ಮಿನ್ ಫೈಝಲ್ ಕಟ್ಟೆಕಾರ್, ಬ್ಲಡ್ ಹೆಲ್ಪ್ ಲೈನ್ ಕಾರ್ಯನಿರ್ವಾಹಕ ರಫೀಕ್ ಪಡು ಬ್ಲಡ್ ಡೋನರ್ಸ್ ಕಾರ್ಯನಿರ್ವಾಹಕ ರವೂಫ್ ಪಾಲ್ತಾಡ್, ಇಂಟೆಕ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮಟ್ಟೆ, ಉದ್ಯಮಿ ಅತಾವುಲ್ಲಾಹ್ ಕೆ.ಎಂ, ಶಮೀರ್ ಮೊಬೈಲ್ ಹಾರ್ಟ್ ಮುಖ್ಯ ಅತಿಥಿಗಳಾಗಿದ್ದರು.

ಸ್ವಾಗತ ಸಮಿತಿ ಕನ್ವೀನರ್ ಸಿದ್ದೀಖ್ ಗೂನಡ್ಕ ಸ್ವಾಗತಿಸಿ ಸೆಕ್ಟರ್ ಪ್ರ. ಕಾರ್ಯದರ್ಶಿ ಸಿದ್ದೀಖ್ ಎಲಿಮಲೆ ವಂದಿಸಿದರು.

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...