ಎಣ್ಮೂರಿನಲ್ಲಿ ಎರಡನೇ ಹಂತದ SDPI ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ

ನಿಂತಿಕಲ್(ವಿಶ್ವಕನ್ನಡಿಗ ನ್ಯೂಸ್): ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಎಣ್ಮೂರು ವಲಯ ಸಮಿತಿ ವತಿಯಿಂದ ಸದಸ್ಯತ್ವ ಅಭಿಯಾನದ ಅಂಗವಾಗಿ ಎಣ್ಮೂರಿನ ಪಕ್ಷದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವಾರು ಮಂದಿ ಪಕ್ಷದ ತತ್ವಸಿದ್ದಾಂತಗಳನ್ನು ಒಪ್ಪಿಕೊಂಡು SDPI ಪಕ್ಷಕ್ಕೆ ಸೇರ್ಪಡೆಯಾದರು.

SDPI ಸುಳ್ಯ ವಿಧಾನಸಭಾ ಸಮಿತಿ ಸದಸ್ಯರಾದ ರಫೀಕ್ ಎಂ.ಎ ರವರು ಪಕ್ಷದ ತತ್ವ ಸಿದ್ದಾಂತ, ಪ್ರಸಕ್ತ ರಾಜಕೀಯ ವಿದ್ಯಮಾನದ ಕುರಿತು ಸವಿಸ್ತಾರವಾಗಿ ವಿವರಿಸಿ ಮಾತನಾಡಿ ನಂತರ ಪಕ್ಷದ ಧ್ವಜವನ್ನು ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ SDPI ಎಣ್ಮೂರು ವಲಯಧ್ಯಕ್ಷರಾದ ಹಮೀದ್ ಮರಕ್ಕಡ ಕಾರ್ಯದರ್ಶಿ ರಫೀಕ್ ನಿಂತಿಕಲ್,ಹಾಗೂ ಸಮಿತಿ ಸದಸ್ಯರಾದ ಬಶೀರ್ ಸಮಾದಿ ಮತ್ತಿತ್ತರು ಉಪಸ್ಥಿತರಿದ್ದರು.

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...