ಐತಿಹಾಸಿಕ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರಿದ ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂದಾ


ವೆಲಿಂಗ್ಟನ್(ವಿಶ್ವ ಕನ್ನಡಿಗ ನ್ಯೂಸ್):ನ್ಯೂಜಿಲ್ಯಾಂಡ್ ನಲ್ಲಿ ಭಾರೀ ಬಹುಮತದೊಂದಿಗೆ ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಜೆಸಿಂದಾ ರನ್ನು ಅಭಿನಂದಿಸಿದ ವಿರೋಧ ಪಕ್ಷ ನಾಯಕ ಜುದಿತ್ ಕಾಲಿನ್ಸ್, ಜೆಸಿಂದಾರಿಗೆ ತಾವು ನೀಡಿದ ಭರವಸೆಗಳನ್ನು ಈಡೇರಿಸಲು ಇನ್ನು ಯಾವುದೇ ಕಾರಣಗಳು ನೀಡಿ ತಪ್ಪಿಸಲಾಗದು ಎಂದು ಎಚ್ಚರಿಸಿದ್ದಾರೆ.ನ್ಯೂಜಿಲ್ಯಾಂಡ್ ನ ರಾಜಕೀಯದ ಇತಿಹಾಸದಲ್ಲಿ ಅದ್ಭುತ ಎಂಬಂತೆ ಬಹುಮತದೊಂದಿಗೆ ಆಯ್ಕೆಯಾದ ಜೆಸಿಂದಾ ಅಂತರಾಷ್ಟ್ರ‍ೀಯ ಆಕರ್ಷಣೆಯಾಗಿದ್ದಾರೆ.ದೇಶದ ಕ್ರೈಸ್ಟ್ ಚರ್ಚ್ ನ ಮಸೀದಿಯಲ್ಲಿ ಭಯೋತ್ಪಾದಕನ ಆಕ್ರಮಣ ಘಟನೆಯನ್ನು ನಿಭಾಯಿಸಿದ ರೀತಿಗೆ ಜಗತ್ತು ಬೆರಗಾಗಿತ್ತು.ಕೊರೋನಾ ಅವಧಿಯಲ್ಲೂ ನಿಯಂತ್ರಿಸಿದ್ದು ಎಲ್ಲರನ್ನೂ ಹುಬ್ಬೇರಿಸಿತ್ತು.ಕೇವಲ 25 ಮಂದಿಯಷ್ಟೇ ಕೋವಿಡ್ ಗೆ ಬಲಿಯಾಗಿದ್ದರು.!

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಜೆಸಿಂದಾರ ವರ್ಚಸ್ಸು ಈ ಗೆಲುವಿನ ಮೂಲಕ ಮತ್ತಷ್ಟು ಹೆಚ್ಚಾಗಿದೆ.ಶನಿವಾರ ನಡೆಸಿದ ಭಾಷಣದಲ್ಲಿ ತನ್ನ ದೇಶದಲ್ಲಿ ಮುಂದೆ ನವೀಕರಣ ಶಕ್ತಿ,ಮೂಲಸೌಕರ್ಯದೆಡೆಗೆ ಹೆಚ್ಚಿನ ಆದ್ಯತೆ,ಮನೆ ನಿರ್ಮಾಣ,ಉದ್ಯೋಗ ಸೃಷ್ಟಿ,ತರಬೇತಿ ಕಾರ್ಯಕ್ರಮಗಳು,ಪರಿಸರ ರಕ್ಷಣೆ,ಬಡತನ-ಹವಾಮಾನ ವೈಪರೀತ್ಯ-ಅಸಮಾನತೆ ಮೊದಲಾದ ವಿಷಯಗಳೆಡೆಗೆ ಇನ್ನಷ್ಟು ಗಮನ ಹರಿಸುವುದಾಗಿ ಭರವಸೆ ನೀಡಿದರು.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...