33 ನಗರಗಳಿಗೆ ನವೆಂಬರ್ ನಿಂದ ವಿಮಾನ ಹಾರಾಟ ನಡೆಸಲಿರುವ ಸೌದಿ ಏರ್ ಲೈನ್ಸ್:ಭಾರತದ ಮೂರು ನಗರಗಳಿಗೆ ಗ್ರೀನ್ ಸಿಗ್ನಲ್


ರಿಯಾದ್(ವಿಶ್ವ ಕನ್ನಡಿಗ ನ್ಯೂಸ್): ಸೌದಿ ಅರೇಬಿಯಾದ ಸೌದಿ ಏರ್ ಲೈನ್ಸ್ ನವೆಂಬರ್ ನಿಂದ ಯುರೋಪ್,ಆಫ್ರಿಕಾ,ಏಷ್ಯಾ ಸೇರಿದಂತೆ 33 ನಗರಗಳಿಗೆ ತನ್ನ ಹಾರಾಟವನ್ನು ಪುನರಾರಂಭಿಸುವುದಾಗಿ ಟ್ವೀಟ್ ಮೂಲಕ ತಿಳಿಸಿದೆ.ಮಧ್ಯಪ್ರಾಚ್ಯದ ಬೈರೂತ್,ದುಬೈ ಗೂ ಮುಂದಿನ ತಿಂಗಳಿನಿಂದ ವಿಮಾನ ಹಾರಾಟ ಆರಂಭವಾಗಲಿದೆ.ಅಮೇರಿಕಾಕ್ಕೆ ಹೋಗಬಯಸುವವರಿಗೆ ವಾಷಿಂಗ್ಟನ್ ಏಕ ಮಾತ್ರ ಮಾರ್ಗವಾಗಲಿದೆ.ಕೋವಿಡ್ ಸಾಂಕ್ರಾಮಿಕದ ಬಳಿಕ ಕಳೆದ ತಿಂಗಳು (ಸೆಪ್ಟೆಂಬರ್) ನಲ್ಲಿ 20 ದೇಶಗಳಿಗೆ ವೈಮಾನಿಕ ಹಾರಾಟ ಆರಂಭಿಸಲಾಗಿತ್ತಾದರೂ ಆ ಬಳಿಕ ಇದೀಗ ಹೊರಪಡಿಸಿದ ನಗರಗಳ ಪಟ್ಟಿಯಲ್ಲಿ ಭಾರತದ ದೆಹಲಿ,ಮುಂಬೈ ಹಾಗು ಕೊಚ್ಚಿ ಸೇರಿದೆ.ಸೌದಿ ಅರೇಬಿಯಾಕ್ಕೆ ಕೆಲಸಕ್ಕೆ ಹಿಂತಿರುಗಲು ಕಾಯುತ್ತಿರುವವರಿಗೆ ಒಂದಿಷ್ಟು ನಿರಾಳತೆಯನ್ನು ತರುವ ಸುದ್ದಿಯಾಗಿದೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...