ಕೆಸಿಎಫ್ ಒಮಾನ್: ಬೃಹತ್ ಮೀಲಾದ್ ಕಾನ್ಫರೆನ್ಸ್ ಯಶಸ್ವಿಗೆ ಕರೆ

ಒಮಾನ್(ವಿಶ್ವಕನ್ನಡಿಗ ನ್ಯೂಸ್): ಪ್ರೀತಿಯ ಪ್ರವಾದಿ ಶಾಂತಿಯ ಹಾದಿ,ಸಮಾನತೆಯ ಸಂದೇಶ ವಾಹಕ ಲೋಕಾನುಗ್ರಹಿ ಹಝ್ರತ್ ಪೈಗಂಬರ್ ಮುಹಮ್ಮದ್ (ಸ.ಅ) ರವರ 1495 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಅಕ್ಟೋಬರ್ 28 ಬುಧವಾರ ( ರಬೀವುಲ್ ಅವ್ವಲ್ 12ರ ರಾತ್ರಿ) ರಾತ್ರಿ ಒಮಾನ್ ಸಮಯ 8 ಗಂಟೆ ಹಾಗೂ ಭಾರತೀಯ ಕಾಲಮಾನ 9.3೦ ಕ್ಕೆ Zoom Online ನಲ್ಲಿ “ಪ್ರವಾದಿ ಹಾದಿಯಲ್ಲಿ ಗೆಲುವಿದೆ” ಎಂಬ ಘೋಷ ವಾಕ್ಯ ದೊಂದಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ ವತಿಯಿಂದ ಬೃಹತ್ ಮೀಲಾದ್ ಕಾನ್ಫರೆನ್ಸ್ – 2020 ನೆಡೆಯಲಿದೆ.

ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಯ್ಯೂಬ್ ಕೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದ ದುಅ ನೇತೃತ್ವವನ್ನು ಸಯ್ಯದ್ ಜಾಫರ್ ಅಸ್ಸಖಾಫ್ ತಂಙಳ್ ಇವರು ವಹಿಸಲಿದ್ದಾರೆ. ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಡಾ.ಶೈಖ್ ಬಾವ ಹಾಜಿ ಮಂಗಳೂರು ಇವರು ಉದ್ಘಾಟಿಸಲಿರವ ಸಮಾರಂಭದಲ್ಲಿ ಎಸ್ಎಸ್ಎಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ರಾದ ಹಾಫಿಝ್ ಎಚ್. ಐ. ಸುಫಿಯಾನ್ ಸಖಾಫಿ ಕಾವಲ್ ಕಟ್ಟೆ ಇವರು ಮುಖ್ಯ ಪ್ರಭಾಷಣಗೈಯಲಿದ್ದಾರೆ.

ಹಾಗೂ ತನ್ವೀರ್ ರಾಝ ಬಾಳೆಹನ್ನೂರ್ ಮತ್ತು ಅಬ್ದುಸಮದ್ ಉರುವಲ್ ಪದವು ಇವರಿಂದ ನ’ಅತೇ ಶರೀಫ್ ಮತ್ತು ಬುರ್ದ ಮಜ್ಲಿಸ್ ನಡೆಯಲಿದೆ ಎಂದು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರಾದ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಇವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...