ಯು.ಎಫ್.ಸಿ ಸೂಪರ್ ಸ್ಟಾರ್ ಖಬೀಬ್ ತಾಯಿಗೆ ಕೊಟ್ಟ ವಚನದಂತೆ ಅಜೇಯನಾಗಿ ವೃತ್ತಿ ಬದುಕಿಗೆ ವಿದಾಯ


ಅಬುಧಾಬಿ(ವಿಶ್ವ ಕನ್ನಡಿಗ ನ್ಯೂಸ್):ಯು.ಎಫ್.ಸಿ ಸೂಪರ್ ಸ್ಟಾರ್ ಖಬೀಬ್ ನುರ್ಮಾಗೊಮೆಡೋವ್ ವೃತ್ತಿ ಬದುಕಿನಲ್ಲಿ ದಾಖಲೆಯ ಬಾರಿ ವಿಜೇತರಾಗಿ ಅಜೇಯನಾಗಿದ್ದುಕೊಂಡೇ ನಿವೃತ್ತಿ ಹೊಂದಿದ್ದಾರೆ.ಅಮೇರಿಕಾದ ಜಸ್ಟಿನ್ ಗೇತ್ಜೆ ರನ್ನು 29-0 ಅಂತರದಲ್ಲಿ ಅಂತಿಮವಾಗಿ ಸೋಲಿಸುವ ಮೂಲಕ ತಮ್ಮ ವೃತ್ತಿ ಬದುಕನ್ನು ಯಶಸ್ವಿಯಾಗೇ ಕೊನೆಗಾಣಿಸಿದ್ದಾರೆ.ಇದೇ ಜುಲೈ ನಲ್ಲಿ ಕೋವಿಡ್ ಬಾಧಿತರಾಗಿ ಇವರ ತಂದೆ ಹಾಗು ವೃತ್ತಿ ಬದುಕಿನ ಕೋಚ್ ಕೂಡ ಆಗಿದ್ದ ಅಬ್ದುಲ್ ಮನಾಫ್ ನುರ್ಮಾಗೊಮೆಡೋವ್ ಇಹಲೋಕ ತ್ಯಜಿಸಿದ್ದರು.ಅಬುಧಾಬಿಯ ಯಾಸ್ ದ್ವೀಪದಲ್ಲಿ ಗೇತ್ಜೆ ರೊಂದಿಗೆ ನಡೆದ ಪಂದ್ಯ ಅಂತಿಮವಾಗಲಿದೆ ಎಂದು ತಾಯಿಗೆ ಮಾತು ಕೊಟ್ಟಿದ್ದರು,ಕೊಟ್ಟ ವಚನವನ್ನು ಉಳಿಸಲಿಕ್ಕಾಗಿಯೇ ವೃತ್ತಿ ಬದುಕಿನಿಂದ ಹಿಂದೆ ಸರಿದಿದ್ದಾರೆ.ಸಾಮಾಜಿಕ ತಾಣದಲ್ಲಿ ಗೆಲುವಿಗಾಗಿ ಸಂಭ್ರಮವೂ,ನಿವೃತ್ತಿಗಾಗಿ ಬೇಸರ ವ್ಯಕ್ತಪಡಿಸುವಿಕೆ ಟ್ರೆಂಡಿಂಗ್ ಆಗಿದೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...