ಫ್ರಾನ್ಸ್ ಅಧ್ಯಕ್ಷರ ಇಸ್ಲಾಮಿ ವಿರೋಧಿ ಹೇಳಿಕೆ: ಅರಬ್ ದೇಶಗಳಲ್ಲಿ, ಟರ್ಕಿಯಲ್ಲಿ ಬಾಯ್ಕಾಟ್ ಅಭಿಯಾನ.


ಫ್ರಾನ್ಸ್(ವಿಶ್ವ ಕನ್ನಡಿಗ ನ್ಯೂಸ್): ಫ್ರಾನ್ಸ್ ಅಧ್ಯಕ್ಷರಾದ ಇಮ್ಯಾನುವೆಲ್ ಮಾಕ್ರೋನ್ ರ ಇಸ್ಲಾಮ್ ವಿರೋಧಿ ಹೇಳಿಕೆಗೆ ವಿವಿಧ ಅರಬ್ ಟ್ರೇಡ್ ಅಸೋಷಿಯೇಶನ್ ಗಳು ಫ್ರೆಂಚ್ ಉತ್ಪಾದನಗಳಿಗೆ ಬಾಯ್ಕಾಟ್ ಬಿಸಿ ತೋರಿಸಿದ್ದಾರೆ.ಜಗತ್ತಿನಾದ್ಯಂತ ಇಸ್ಲಾಮ್ “ಕುಸಿತ” ದ ಭೀತಿಯಲ್ಲಿದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.ಇವರ ಹೇಳಿಕೆಯಿಂದ ಪ್ರಭಾವಿತರಾಗಿ ಅನೇಕ ಪಬ್ಲಿಷಿಂಗ್ ಗಳು ಪ್ರವಾದಿ ಮಹಮ್ಮದರದು ಎಂದು ಬಿಂಭಿಸುವ ಮತ್ತು ಅಣಕಿಸುವ ವ್ಯಂಗ್ಯ ಚಿತ್ರಗಳ ಪ್ರಕಟಣೆ-ಮಾರುಕಟ್ಟೆಗಳಲ್ಲಿ ಪ್ರದರ್ಶನ ಮೊದಲಾದ ದ್ವೇಷ ಪೂರಿತ ವಾತಾವರಣ ಸೃಷ್ಟಿಸಲು ಯತ್ನಿಸಿದ್ದವು.ಈ ಎಲ್ಲಾ ವಿದ್ಯಮಾನಗಳ ಬಳಿಕವೂ ಅಧ್ಯಕ್ಷರು ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಲಿಲ್ಲ.ಮಧ್ಯಪ್ರಾಚ್ಯದ ವಿವಿಧ ದೇಶಗಳು,ಟರ್ಕಿ ದೇಶದಲ್ಲಿ ಸೂಪರ್ ಮಾರ್ಕೆಟ್ ಗಳು ಇದೀಗ ಫ್ರಾನ್ಸ್ ಉತ್ಪಾದನೆಗಳ ಮಾರಾಟವನ್ನು ಸ್ವಯಂ ಇಚ್ಚೆಯಿಂದಲೇ ಬಾಯ್ಕಾಟ್ ಮಾಡುವ ಮೂಲಕ ಪ್ರತಿರೋಧದಲ್ಲಿ ತೊಡಗಿದ್ದಾರೆ.ಟ್ವಿಟ್ಟರ್ ನಲ್ಲಿ ಬಾಯ್ಕಾಟ್ ಫ್ರೆಂಚ್ ಪ್ರೊಡಕ್ಟ್ಸ್ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...