ಎರಡನೇ ಹಂತದ ಲಾಕ್ ಡೌನ್ ಮಾಡುವ ಉದ್ದೇಶವಿಲ್ಲ: ಸೌದಿ ಆರೋಗ್ಯ ಸಚಿವ

ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಎರಡನೇ ಹಂತದ ಲಾಕ್ ಡೌನ್ ಪ್ರಾರಂಭವಾಗಲಿದೆ ಎಂಬ ಕುರಿತು ಊಹಾಪೋಹಗಳು ಹರಡುತ್ತಿದ್ದು, ಈ ಕುರಿತು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ ಎಂದು ಸೌದಿ ಅರೇಬಿಯಾದ ಆರೋಗ್ಯ ಸಚಿವ ತೌಫೀಕ್ ಅಲ್ ರಬಿಯಾ ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರದ ಹವಾಮಾನವು ಸುಡುಬಿಸಿಲಿನಿಂದ ಚಳಿಗಾಳದತ್ತ ಬದಲಾವಣೆಯಾಗುತ್ತಿದ್ದು, ಸದ್ಯ ಕೊವಿಡ್ ವ್ಯಾಪಕವಾಗದಂತೆ ಸೌದಿ ಸರಕಾರವು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಸರಕಾರದೊಂದಿಗೆ ಸಹಕರಿಸಬೇಕೆಂದು ಸಚಿವರು ಜನತೆಗೆ ಮನವಿ ಮಾಡಿದರು.

ಸೌದಿಯಾದ್ಯಂತ ದೈನಂದಿನ ಕೊವಿಡ್ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಜನತೆ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಮುಂಜಾಗೃತಾ ಕ್ರಮಗಳನ್ನು ಸರಿಯಾಗಿ ಪಾಲಿಸದ ಹಿನ್ನೆಲೆಯಲ್ಲಿ ಎರಡನೇ ಹಂತದ ಲಾಕ್ ಡೌನ್ ಸನ್ನಿಹಿತವಾಗಬಹುದೆಂಬ ಸೌದಿ ಆರೋಗ್ಯ ಸಚಿವರು ಕೆಲವು ದಿನಗಳ ಹಿಂದೆ ನೀಡಿದ ಹೇಳಿಕೆಯನ್ನು ಇಲ್ಲಿ ಸ್ಮರಿಸಬಹುದಾಗಿದೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...