ಹಳ್ಳಿ ಹಳ್ಳಿಗಳಲ್ಲಿ ಹೋಗಿ ಕೃಷಿ ಕಾನೂನಿನ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯವಿದೆ: ಸುಳ್ಯದಲ್ಲಿ SDPI ವತಿಯಿಂದ ನಡೆದ ಜಾಗೋ ಕಿಸಾನ್ ಅಭಿಯಾನದಲ್ಲಿ ಎಂ.ಬಿ.ಸದಾಶಿವ

ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರ ಜಾರಿಗೆ ತಂದ ಕೃಷಿ ಮಸೂದೆ ವಿರುದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ “ಜಾಗೋ ಕಿಸಾನ್, “ಕೃಷಿ ಸಂಹಾರ ಬಿಜೆಪಿಯ ಹುನ್ನಾರ” ಎಂಬ ಶೀರ್ಷಿಕೆಯಡಿ ದೇಶವ್ಯಾಪಿ ಅಭಿಯಾನವನ್ನು ಕೈಗೊಂಡಿದ್ದು ಇದರ ಅಂಗವಾಗಿ ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಕ್ಷೇತ್ರದ ವತಿಯಿಂದ ಪಾದಯಾತ್ರೆ ಮತ್ತು ಪ್ರತಿಭಟನಾ ಸಭಾ ಕಾರ್ಯಕ್ರಮ ಅ.27 ರಂದು ಸುಳ್ಯ ದಲ್ಲಿ ನಡೆಯಿತು.

ಸುಳ್ಯ ಜ್ಯೋತಿ ಸರ್ಕಲ್ ಬಳಿ ಎಸ್ ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಸುಳ್ಯ ವಿಧಾನಸಭಾ ಕ್ಷೇತ್ರದಾದ್ಯಕ್ಷ ಅಬ್ದುಲ್ ಕಲಾಂ ಸುಳ್ಯ ರವರಿಗೆ ಪಕ್ಷದ ದ್ವಜ ಹಸ್ತಾಂತರ ಮಾಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ಹಳೆ ಬಸ್ ನಿಲ್ದಾಣದ ತನಕ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗುತ್ತಾ ಪಾದಯಾತ್ರೆ ನಡೆಸಲಾಯಿತು. ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಕ್ಷೇತ್ರಾದ್ಯಕ್ಷ ಅಬ್ದುಲ್ ಕಲಾಂ ಸುಳ್ಯ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮಾತನಾಡಿ “ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಿರಂತರವಾಗಿ ಜನವಿರೋದಿ ಕಾನೂನನ್ನೆ ಜಾರಿಗೊಳಿಸುತ್ತಿದೆ.ಇಂದು ಕೃಷಿ ಮಸೂದೆಯನ್ನು ಜಾರಿಗೊಳಿಸಿ ಈ ದೇಶದ ಬೆನ್ನೆಲುಬಾಗಿರುವ ರೈತರನ್ನು ಗುಲಾಮಗಿರಿಗೆ ತಳ್ಳುವಂತೆ ಮಾಡಿದೆ‌.ಈ ನೀತಿಯ ವಿರುದ್ಧ ದೊಡ್ಡ ರೀತಿಯ ಜನಾಂದೋಲನದ ಅಗತ್ಯವಿದೆ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ ಸದಾಶಿವರವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜಾರಿಗೊಳಿಸಿದ ಜನವಿರೋದಿ ಮಸೂದೆಯ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದು ಹೇಳಿದರು.

ಕರ್ನಾಟಕ ರೈತ ಸಂಘ ಹಸಿರು ಸೇನೆ ಕಡಬ ತಾಲೂಕು ಅಧ್ಯಕ್ಷ ವಿಕ್ಟರ್ ಮಾರ್ಟಿಸ್ ಮತ್ತು ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ವಿಕ್ಟರ್ ಮಾರ್ಟಿಸ್ ಮಾತನಾಡಿದರು.

ವೇದಿಕೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಪಿಎಫ್ಐ ಪುತ್ತೂರು ಅದ್ಯಕ್ಷ ಜಾಬಿರ್ ಅರಿಯಡ್ಕ ಸೇರಿದಂತೆ ನಾಯಕರಾದ ಶಾಫಿ ಬೆಳ್ಳಾರೆ ಪಿಎಫ್ಐ ರಾಜ್ಯ ನಾಯಕರು,ಮುಸ್ತಫಾ ಎಂ.ಕೆ ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ, ಅಥಾವುಲ್ಲಾ ಕಲ್ಲುಮುಟ್ಲು ಎಸ್.ಡಿ.ಪಿ.ಐ ಸುಳ್ಯ ನಗರಾದ್ಯಕ್ಷರು,ಫೈಝಲ್ ಬೆಳ್ಳಾರೆ ಅಧ್ಯಕ್ಷರು ಪಿಎಫ್ಐ ಸುಳ್ಯ ಡಿವಿಷನ್,ಸೇರಿದಂತೆ ಅನೇಕ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತಿರಿದ್ದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...