ಜೆದ್ದಾ(www.vknews.in): ಮೂರನೇ ಹಂತದ ಉಮ್ರಾ ಸೇವೆಯು ಆದಿತ್ಯವಾರದಿಂದ(ನವೆಂಬರ್ 1) ರಿಂದ ಪ್ರಾರಂಭಗೊಳ್ಳಲಿದ್ದು, ಈ ಹಂತದಲ್ಲಿ ನಿಯಮಿತ ಸಂಖ್ಯೆಯ ವಿದೇಶಿ ಉಮ್ರಾ ಯಾತ್ರಾರ್ಥಿಗಳಿಗೆ ಉಮ್ರಾ ನೆರವೇರಿಸಲು ಸೌದಿ ಸರಕಾರವು ಅವಕಾಶ ಕಲ್ಪಿಸಲಿದೆ. ಆದರೆ ಭಾರತದ ಉಮ್ರಾ ಯಾತ್ರಾರ್ಥಿಗಳ ಕುರಿತಾಗಿರುವ ಅನಿಶ್ಚಿತತೆ ಇನ್ನೂ ಕೂಡ ಮುಂದುವರಿದಿದ್ದು, ವಿದೇಶದಿಂದ ಬರುವ ಅತಿಥಿಗಳನ್ನು ಸ್ವಾಗತಿಸಲು ಮಕ್ಕಾ ನಗರವು ಸಜ್ಜಾಗಿ ನಿಂತಿದೆ.
ಉಮ್ರಾಗೆ ಬರಲು ಬಯಸುವ ವಿದೇಶಿ ಯಾತ್ರಾರ್ಥಿಗಳಿಗೆ ಸೌದಿಗೆ ತೆರಳುವ 72 ಗಂಟೆಗಳ ಮುಂಚಿತವಾಗಿ ಕೊವಿಡ್ ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದ್ದು, ಸೌದಿ ಅರೇಬಿಯಾದಲ್ಲಿ ಬಂದಿಳಿದ ನಂತರ ಮೂರು ದಿನಗಳ ಕಾಲ ಕ್ವಾರೆಂಟೈನ್ ಕಡ್ಡಾಯವಾಗಿದೆ. ಮೂರನೇ ಹಂತದಲ್ಲಿ ಸೌದಿ ಸರಕಾರವು ಪ್ರತಿದಿನ ವಿವಿದ ರಾಷ್ಟ್ರಗಳ ಸುಮಾರು 20,000 ಯಾತ್ರಾರ್ಥಿಗಳಿಗೆ ಉಮ್ರಾ ನೆರವೇರಿಸಲು ಅವಕಾಶ ನೀಡಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.