ಜೆದ್ದಾ(www.Vknews.in): ಸೌದಿ ಅರೇಬಿಯಾದಲ್ಲಿ ಅಕ್ರಮವಾಗಿ ವಾಸಿಸುವವ ವಿದೇಶಿಗಳಿಗೆ ನೆರವು ನೀಡುವವರಿಗೆ ಒಂದು ಲಕ್ಷ ರಿಯಾಲ್ ದಂಡ ಹಾಗೂ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದೆಂದು ಸೌದಿ ಆಂತರಿಕ ಸಚಿವಾಲಯವು ಎಚ್ಚರಿಕೆಯನ್ನು ನೀಡಿದೆ.
ಅಕ್ರಮ ವಲಸಿಗರ ವಿರುದ್ಧ ಕಠಿನ ಕ್ರಮ ಜರುಗಿಸುವ ನಿಟ್ಟಿನಲ್ಲಿ ಹೆಜ್ದೆಯಿಟ್ಟಿರುವ ಸಚಿವಾಲಯವು, ಇಖಾಮ ರಹಿತ ಅಕ್ರಮ ವಲಸಿಗರಿಗೆ ವಸತಿ, ನೌಕರಿಯನ್ನು ಒದಗಿಸುವುದು ಶಿಕ್ಷಾರ್ಹ ಅಪರಾದವೆಂದು ಘೋಷಿಸಿದೆ ಮಾತ್ರವಲ್ಲ ಅಂತಹವರನ್ನು ದಂಡ ಹಾಗೂ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದೆಂದು ಎಚ್ಚರಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.