ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಬಿಡುಗಡೆಯಾದ ವಿನೂತನ ಕಿರುಚಿತ್ರ “ಕನ್ನಡಿಗ”

(ವಿಶ್ವ ಕನ್ನಡಿಗ ನ್ಯೂಸ್) : ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಬಿಡುಗಡೆಯಾದ ವಿನೂತನ ಕಿರುಚಿತ್ರ “ಕನ್ನಡಿಗ” ಹ್ಯಾಂಡ್ ಕ್ರಾಫ್ಟ್ ಫೀಲಾಂ ಮೂಲಕ ನಿರ್ಮಾಣಗೊಂಡು ಪ್ರಣವ ಭಟ್ ನಿರ್ದೇಶನ ಹಾಗೂ ಅಕ್ಷತ್ ಭಟ್ ಛಾಯಾಗ್ರಹಣದೊಂದಿಗೆ ಸುಂದರವಾಗಿ ಮೂಡಿಬಂದಿದೆ. ಯುವ ಪೀಳಿಗೆಯು ಕವಿಯಾಗಬೇಕು ಲೇಖಕ ಆಗಬೇಕು ತಾನು ಒಂದು ಪುಸ್ತಕ ಬರೆಯಬೇಕು ಎಂಬ ಬಯಕೆ ಹೊತ್ತು ಅದನ್ನೇ ಕನಸು ಕಾಣುತ್ತಿರುತ್ತಾರೆ.

ಆದರೆ ಕೆಲವು ಜನರು ಅದನ್ನು ಪ್ರೋತ್ಸಾಹಿಸದೆ ಅದರಲ್ಲಿ ಹಣ ಬರುವುದಿಲ್ಲ. ಕವಿ ಅಥವಾ ಲೇಖಕ ಆಗಿ ಏನು ಪ್ರಯೋಜನವಿಲ್ಲ ಎಂದು ಹೇಳಿ ತಮ್ಮ ಗೆಳೆಯರು , ಸಮಾಜದ ಅನೇಕ ಜನರು ಅವರ ಕನಸನ್ನು ನನಸು ಮಾಡಲು ಬಿಡದೆ ಕನಸಾಗಿಯೇ ಉಳಿಯುವಂತೆ ಮಾಡುತ್ತಾರೆ. ಈ ವಾಸ್ತವ ಪರಿಸ್ಥಿತಿಯನ್ನು ಬದಲಿಸಲು ಮಾಡಿದ ಒಂದು ಪ್ರಯತ್ನವೇ “ಕನ್ನಡಿಗ”. ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ಎಂ.ಎ ಮಾಡಿ ಕನ್ನಡ ಭಾಷೆಯ ಶಕ್ತಿ ಅರಿತು ಕನ್ನಡದಲ್ಲಿ ಏನಾದರೂ ಸಾಧನೆ ಮಾಡಬೇಕು ಪುಸ್ತಕ ಬರೆಯಬೇಕು ಎಂಬ ಆಸೆಯಿಂದ ದಿನ ಕಳೆಯುತ್ತಿರುವ ವ್ಯಕ್ತಿಯ ಕಥೆಯೇ ಕಥೆಯ ಆಧಾರ. ಜನರು ಅವನನ್ನು ಕನಸು ಪೂರ್ತಿ ಮಾಡಲು ಬಿಡದಿದ್ದರೂ ಅವರನ್ನು ಮೀರಿ ಕನ್ನಡಕ್ಕೆ ಕೊಡುಗೆ ನೀಡಲು ಮುಂದಾಗುತ್ತಾನೆ.ಈ ಕಿರುಚಿತ್ರದಲ್ಲಿ ಕನ್ನಡಿಗನಂತೆ ಇರುವ ವ್ಯಕ್ತಿಯ ಹೆಸರು ಊರು ಕೊನೆಗೆ ತಿಳಿಯುತ್ತದೆ.

ಬೇರೆ ಊರಿಂದ ಬಂದವರೇ ಕನ್ನಡಕ್ಕೆ ಕೊಡುಗೆ ನೀಡಲು ಮುಂದಾಗಿರುವಾಗ ಕನ್ನಡಿಗರಾದ ನಾವು ಸದಾ ಕನ್ನಡವನ್ನು ಬೆಳೆಸಿ ಉಳಿಸಬೇಕು ಎಂಬುದೇ ಕಿರುಚಿತ್ರದ ಮುಖ್ಯ ಆಶಯ. ಈ ಕಿರುಚಿತ್ರವನ್ನು ಹ್ಯಾಂಡ್ ಕ್ರಾಫ್ಟ್ ಫೀಲಾಂ ಯೂಟ್ಯೂಬ್ ಚೆನೆಲ್ ಮೂಲಕ ನೋಡಿ ಯುವ ತಂಡವನ್ನು ಪ್ರೋತ್ಸಾಹಿಸಿ ಕನ್ನಡವನ್ನು ಬೆಳೆಸಿ ಎಲ್ಲಾ ಯುವ ಬರಹಗಾರರನ್ನು ಪ್ರೋತ್ಸಾಹಿಸಿ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...