ಶ್ರೀನಿವಾಸ್ ವಿವಿಯ ಏವಿಯೇಶನ್ ಸ್ಟಡೀಸ್ ವಿದ್ಯಾರ್ಥಿಗಳಿಗೆ ಆನ್ಲೈನ್ ಫ್ಲೈಯರ್ ಮೇಕಿಂಗ್ ಸ್ಪರ್ಧೆ

ಮಂಗಳೂರು(www.vknews.com):  ಶ್ರೀನಿವಾಸ್ ವಿಶ್ವವಿದ್ಯಾಲಯ ಕಾಲೇಜು ಆಫ್ ಏವಿಯೇಷನ್ ಸ್ಟಡೀಸ್ ವತಿಯಿಂದ ಬಿಬಿಎ ಏವಿಯೇಷನ್ ಮಾನೇಜ್‍ಮೆಂಟ್ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಗುರುತಿಸುವ ಉದ್ದೇಶದಿಂದ ಫ್ಲೈಯರ್ ಮೇಕಿಂಗ್ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳು ಫ್ಲೈಯರ್‍ಗಳನ್ನು ಕಾಗದ ಮೂಲಕ ಅಥವಾ ಡಿಜಿಟಲ್ ಮೋಡಲ್‍ಗಳ ಮೂಲಕ ಸಿದ್ಧಪಡಿಸಬೇಕಾಗಿತ್ತು. ಇವುಗಳಲ್ಲಿ ಅತ್ಯುತ್ತಮ ಮೂರು ಫ್ಲೈಯರ್‍ಗಳಿಗೆ ಬಹುಮಾನ ನೀಡಲಾಯಿತು.

ಈ ಸ್ಪರ್ಧೆಯಲ್ಲಿ 32 ವಿದ್ಯಾರ್ಥಿಗಳು ಸಕ್ರೀಯವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಅಂತಿಮ ವರ್ಷದ ನಯನಾ ಮಧುಸೂದನ್ ಪ್ರಥಮ ಸ್ಥಾನ, ಪ್ರಥಮ ವರ್ಷದ ಬಿಬಿಎ ಏವಿಯೇಶನ್ ಮ್ಯಾನೇಜ್‍ಮೆಂಟನ್ ವಿದ್ಯಾರ್ಥಿ ಅಂಜನಾ ಗೌಡ ದ್ವಿತೀಯ, ದ್ವಿತೀಯ ವರ್ಷದ ಬಿಬಿಎ ಏವಿಯೇಶನ್ ಮ್ಯಾನೇಜ್‍ಮೆಂಟ್‍ನ ಜಾನ್ ರೋಡ್ರಿಗಸ್ ಮೂರನೇ ಸ್ಥಾನವನ್ನು ಪಡೆದುಕೊಂಡರು.

ಸ್ಪರ್ಧೆಯನ್ನು ಶ್ರೀನಿವಾಸ್ ವಿವಿಯ ಏವಿಯೇಷನ್ ಮ್ಯಾನೇಜ್‍ಮೆಂಟ್‍ನ ಡೀನ್ ಪ್ರೊ. ಪವಿತ್ರ ಕುಮಾರಿ ಆಯೋಜಿಸಿದ್ದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...