ಮಂಗಳೂರು (www.vknews.com) : ಜನಸಂಖ್ಯೆ ಸ್ಫೋಟದಿಂದ ಮನುಷ್ಯನಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಮಸ್ಯೆಗಳು ಉಂಟಾಗಲಿದೆ. ಆನಸಂಖ್ಯಾ ನಿಯಂತ್ರಣಕ್ಕೆ ಪ್ರತಿಯೊಬ್ಬರು ಕೈಜೋಡಿಬೇಕೆಂದು ಜಿಲ್ಲಾ ಪಂಚಾಯತ್ನ ಯೋಜನಾ ನಿರ್ದೇಶಕಿ ಸಂಧ್ಯಾ ಡಿ ಎಂದು ಕರೆ ನೀಡಿದರು.
ಅವರು ಗುರುವಾರ ನಗರದ ಜಿಲ್ಲಾಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ ಇವರ ಸಹಯೋಗದಲ್ಲಿ ಆಯೋಜಿಸಿದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜನಸಂಖ್ಯೆ ಹೆಚ್ಚಾದಾಗ ಭೌಗೋಳಿಕವಾಗಿ ಇರುವಂತಹ ನೆಲ-ಜಲ, ಪರಿಸರ-ಪ್ರಕೃತಿ ಅದೇ ರೀತಿಯಲ್ಲಿಯೇ ಇದ್ದು ಆದರೆ ಜನಸಂಖ್ಯೆ ಹೆಚ್ಚಾದಾಗ ಎಲ್ಲಾ ಮೂಲಭೂತ ಸೌಕರ್ಯಗಳು ಅಧಿಕವಾಗಿ ಹಂಚಿ ಹೋಗುತ್ತಿದೆ.
ಜಿಲ್ಲಾ ಪಂಚಾಯತ್ನ ಯೋಜನಾ ನಿರ್ದೇಶಕಿ ಸಂಧ್ಯಾ ಡಿ ಮಾತನಾಡಿ ಜನಸಂಖ್ಯೆ 2011 ರ ಜನಗಣತಿಯ ಪ್ರಕಾರ 10.11: ಇದರ ನಡುವೆ ಇದ್ದರೆ ಆರೋಗ್ಯಕರ . ದ.ಕ ಜಿಲ್ಲೆಯಲ್ಲಿ ಸ್ತ್ರೀಯರ ಜನಸಂಖ್ಯೆಯು ಅತ್ಯಂತ ಕಡಿಮೆ ಇದೆ ಆದ್ದರಿಂದ ಸ್ತ್ರೀಯರ ಜನಸಂಖ್ಯೆ ಕಡಿಮೆಯಾಗಿರುವುದು ಆರೋಗ್ಯಕರವಲ್ಲವೆಂದು ತಿಳಿಸಿದರು.
ವೆನ್ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರು ಹಾಗೂ ಅಧೀಕ್ಷಕರು ಡಾ.ಸದಾಶಿವ ಶಾನುಭೋಗ್ ಮಾತನಾಡಿ ಆರೋಗ್ಯ ಶಿಕ್ಷಣದ ಬಗ್ಗೆ ಸಾರ್ವಜನಿಕರಲ್ಲಿ ಅರವು ಮೂಡಿಸಬೇಕು, ಜನಸಂಖ್ಯಾ ನಿಯಂತ್ರಣಕ್ಕೆ ಕುಟುಂಬಕಲ್ಯಾಣ ಯೋಜನೆಗಳ ಬಗ್ಗೆ ಜನರಲ್ಲಿ ತಿಳಿಸಿ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ತಿಳಿಸಬೇಕು ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್. ಬಿ ಮಾತನಾಡಿ ಜನಸಂಖ್ಯಾ ನಿಯಂತ್ರಕ್ಕೆ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದ ಸರ್ಕಾರವು ಆರೋಗ್ಯ ಇಲಾಖೆಯ ಮೂಲಕ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ, ಇವುಗಳನ್ನು ಸಾರ್ವಜನಿಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜನಸಂಖ್ಯಾ ನಿಯಂತ್ರಣಕ್ಕೆ ಕಡಿವಾಣವನ್ನು ಹಾಕಬಹುದಾಗಿದೆ. ಸಮಾಜವು ಅನುಭವಿಸುತ್ತಿರುವ 90ರಷ್ಟು ಸಮಸ್ಯೆಗಳು ಜನಸಂಖ್ಯೆಯ ಹೆಚ್ಚಳದಿಂದ ಆಗಿವೆ ಎಂದರು.
ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಜಿಲ್ಲಾ ವೈದ್ಯಕೀಯ ಅಧೀಕ್ಷಕ ಡಾ|| ದುರ್ಗಪ್ರಸಾದ್ ಜನಸಂಖ್ಯಾ ದಿನಾಚರಣೆಯ ಮುಖ್ಯ ಉದ್ದೇಶವನ್ನು ಸಾರುವ ಸ್ವರಚಿತ ಕವನವನ್ನು ಮಂಡಿಸಿದರು.
ಪ್ರಸ್ತುತ ಸಾಲಿನಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದ ಆರೋಗ್ಯ ಇಲಾಖೆಯ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಅವರ ಕೆಲಸದಲ್ಲಿನ ಉತ್ತಮ ಸೇವೆಗಾಗಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದ.ಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಟಿ. ಪಾಪ ಬೋವಿ, ಹಾಗೂ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕಿಯರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆರು ಉಪಸ್ಥಿತರಿದ್ದರು.
. ಜನಸಂಖ್ಯಾ ಹೆಚ್ಚಳ ಮಾರಕವು ಆಗಿದೆ ಪೂರಕವು ಆಗಿದೆ. ಜನಸಂಖ್ಯೆಯಿಂದ ಪೂರಕವಾಗಿ ಯುವ ಜನರಿಗೆ ಉತ್ತಮವಾದ ಶಿಕ್ಷಣ-ಕೌಶಲ್ಯವನ್ನು ನೀಡುವುದರ ಮೂಲಕ ದೇಶಕ್ಕೆ ಸದ್ಭಾಳಕೆಯನ್ನು ಮಾಡಿಕೊಳ್ಳುವುದರೊಂದಿಗೆ ಜನಸಂಖ್ಯೆ ಹೆಚ್ಚಾಳವನ್ನು ಪೂರಕವಾಗಿಸಿಕೊಳ್ಳಬಹುದು ಎಂದು ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಚಂದ್ರ ಬಾಯರಿ ಹೇಳಿದರು ಜನಸಂಖ್ಯೆ ಹೆಚ್ಚಳದಿಂದ ಸಾಮಾಜಿಕ ಅಸಮಾನತೆ ಉಂಟಾಗುವುದರ ಜೊತೆಗೆ ಜನರಿಗೆ ಅಗತ್ಯವಿರುವ ಆಹಾರ, ವಸತಿ ಕೊರತೆ, ಮಾಲಿನ್ಯಗಳು ಉಂಟಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ನಾವೆಲ್ಲರೂ ಜನಸಂಖ್ಯೆಯ ಸ್ಥಿರತೆಗಾಗಿ ಕಾರ್ಯೋನ್ಮುಕರಾಗಬೇಕು ಎಂದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.