(www.vknews.in)ನೆಕ್ಕಿಲಾಡಿ 34 ರಲ್ಲಿ ನಡೆಯುತ್ತಿರುವ ವಾರದ ಸಂತೆಯು, ಸಂತೆ ಮೇಳ ಎನ್ನುವ ಹೆಸರಿನೊಂದಿಗೆ ಅಲ್ಲಿಯ ವ್ಯಾಪಾರಿಗಳ ಸಹಕಾರದೊಂದಿಗೆ 3 ನೇ ವಾರ ಕೂಡ ಕಡಿಮೆ ದರದಲ್ಲಿ ತರಕಾರಿ ಮತ್ತು ಇನ್ನಿತರ ದಿನಸಿ ವಸ್ತುಗಳನ್ನು ಗ್ರಾಹಕರಿಗೆ ಕೊಡುವ ಉದ್ದೇಶ ದಿಂದ ದರಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೌತೆ ಕಾಯಿ 15 ರೂಪಾಯಿ,ಬೀನ್ಸ್ 15 ರೂಪಾಯಿ,ಟೊಮಾಟೊ 20 ರೂಪಾಯಿ, ಕೇಶು ಬೀಜ 20 ರೂಪಾಯಿ, ಬೆಂಡೆ 20 ರೂಪಾಯಿ, ತೊಂಡೆಕಾಯಿ 30 ರೂಪಾಯಿ, ಹೀರೆಕಾಯಿ 25, ಮುಳ್ಳುಸೌತೆ 20, ಚೀನಿಕಾಯಿ 20 ರೂಪಾಯಿ, ಕೋಸು 30 ರೂಪಾಯಿ, ಶುಂಠಿ 40 ರೂಪಾಯಿ, ನೀರುಳ್ಳಿ 55 ರೂಪಾಯಿ, ಅದೇ ರೀತಿ ಒಣ ಮೀನು ಕಿಲೋಗೆ 120 ರೂಪಾಯಿ. ಹಸಿ ಮೀನು ಬಂಗುಡೆ 120 ರೂಪಾಯಿ.
ಇದರೊಂದಿಗೆ ಈ ದಿನ ಮರ ಕೊಯ್ಯುವ ಯಂತ್ರ ಮತ್ತು ಹುಲ್ಲು ಕೊಯ್ಯುವ ಯಂತ್ರದ ಪ್ರದರ್ಶನ ಮತ್ತು ಮಾರಾಟ ವಿಶೇಷ ರಿಯಾಯಿತಿ ದರದಲ್ಲಿ ನಡೆಯಲ್ಲಿಕ್ಕಿದೆ
