ನಾಳೆ ನ.20 KCF-INC ಸಮಿತಿಯಿಂದ ಗ್ಲೋಬಲ್ ಮೀಲಾದ್ ಕಾನ್ಫರೆನ್ಸ್: ಸುಲ್ತಾನುಲ್ ಉಲಮಾ ಮುಖ್ಯ ಅತಿಥಿ

ಯುಎಈ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಅತ್ಯುನ್ನತ ಘಟಕವಾದ ಅಂತರ್ರಾಷ್ಟ್ರೀಯ ಸಮಿತಿಯಿಂದ ನವೆಂಬರ್ 20 ರಂದು ಭಾರತೀಯ ಸಮಯ ರಾತ್ರಿ 7.30 ಕ್ಕೆ ಝೂಮ್ ಅಪ್ಲಿಕೇಶನ್ ಮೂಲಕ ಗ್ರಾಂಡ್ ಮೀಲಾದ್ ಸಮಾವೇಶ ಹಾಗೂ ತಾಜುಲ್ ಉಲಮಾ & ನೂರುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಭಾರತೀಯ ಮುಸಲ್ಮಾನರ ಅಧಿಕೃತ ಶಬ್ಧ ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಶೈಖುನಾ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಉಸ್ತಾದರು ಹುಬ್ಬುರ್ರಸೂಲ್ ಭಾಷಣ ಮಾಡಲಿದ್ದಾರೆ.

ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಡಾ| ಶೇಖ್ ಬಾವ ಮಂಗಳೂರು ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಾಗರದ ಪ್ರಸಿದ್ಧ ಉದ್ಯಮಿ,ಉಮರಾ ನಾಯಕ ಸಾಗರ ಮುಹಮ್ಮದ್ ಹಾಜಿಯವರು ಉದ್ಘಾಟಿಸುವರು.ನೌಫಲ್ ಸಖಾಫಿ ಕಳಸ ಭಾಷಣ ಮಾಡಲಿರುವರು.

ಡಾ| ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಡಾ| ಅಬ್ದುರ್ರಶೀದ್ ಝೈನಿ, ಶಾಫೀ ಸಅದಿ ಬೆಂಗಳೂರು, ಸುಫ್ಯಾನ್ ಸಖಾಫಿ, ಖಮರುದ್ದೀನ್ ಗೂಡಿನಬಳಿ, ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ಹಾಗೂ ಇನ್ನಿತರ ಉಲಮಾ ,ಉಮರಾ ನೇತಾರರು ಭಾಗವಹಿಸಲಿದ್ದಾರೆಂದು ಕಾರ್ಯಕ್ರಮದ ಉಸ್ತುವಾರಿ ಎಸ್ ಪಿ ಹಂಝ ಸಖಾಫಿ ಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಝೂಂ ಲಿಂಕ್:

https://us02web.zoom.us/j/87079733818?pwd=Y1diZGVlNENZYUFQaW9PN1NtV3pTdz09

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...