ಭಾರತೀಯ ಆರೋಗ್ಯ ಕಾರ್ಯಕರ್ತರಿಗೆ ನೇರವಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಅನುಮತಿ

ಜೆದ್ದಾ(www.Vknews.in): ರಜೆಯಲ್ಲಿ ತಾಯ್ನಾಡಿಗೆ ತೆರಳಿ ಕೊವಿಡ್ ಲಾಕ್ ಡೌನ್ ಕಾರಣ ಹಿಂದಿರುಗಲಾರದೇ ಸಿಲುಕಿಕೊಂಡಿರುವ ಭಾರತೀಯರಿಗೆ ಸೌದಿ ಅರೇಬಿಯಾಕ್ಕೆ ನೇರ ವಿಮಾನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಇದರ ಪ್ರಥಮ ಹಂತವಾಗಿ ಭಾರತೀಯ ಆರೋಗ್ಯ ಕಾರ್ಯಕರ್ತರು ಹಾಗೂ ಅವರ ಕುಟುಂಬಸ್ಥರಿಗೆ ನೇರವಾಗಿ ಸೌದಿಗೆ ಪ್ರಯಾಣಿಸಲು ಅನುಮತಿ ನೀಡುವ ಪ್ರಕ್ರಿಯೆಗೆ ಚಾಲನೆ ದೆೊರೆತಿದೆ.

ಸೌದಿಯಲ್ಲಿರುವ ಭಾರತದ ದೂತವಾಸ ಅಧಿಕಾರಿಗಳ ಸತತ ವಿನಂತಿಯ ಮೇರೆಗೆ ಸೌದಿ ವಿಮಾನಯಾನ ಪ್ರಾಧಿಕಾರವು ಭಾರತದ ಆರೋಗ್ಯ ಕಾರ್ಯಕರ್ತರಿಗೆ ನೇರವಾಗಿ ಸೌದಿಗೆ ಪ್ರಯಾಣಿಸಲು ಹಸಿರು ನಿಶಾನೆ ನೀಡಿದ್ದು, ಮುಂದೆ ಅತೀ ಶೀಘ್ರದಲ್ಲೇ ತಾಯ್ನಾಡಿನಲ್ಲಿ ಸಿಲುಕಿಕೆೊಂಡಿರುವ ಭಾರತೀಯ ಕಾರ್ಮಿಕರಿಗೂ ಸೌದಿಗೆ ಪ್ರಯಾಣಿಸಲು ನೇರ ವಿಮಾನ ಸೌಕರ್ಯ ಕಲ್ಪಿಸುವ ಸಾಧ್ಯತೆ ನಿಚ್ಚಳವಾಗಿದೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...