ಮಂಗಳೂರು(www.Vknews.in): “ಉದಾತ್ತ ರಾಜಕೀಯಕ್ಕಾಗಿ, ಸದ್ರಢ ಭವಿಷ್ಯ ನಿರ್ಮಾಣಕ್ಕಾಗಿ SDPI ಸೇರಿರಿ” ಎಂಬ ಘೋಷಣೆ ಯೊಂದಿಗೆ ರಾಜ್ಯಾದ್ಯಂತ ನಡೆಯುವ ಎಸ್ಡಿಪಿಐ ಪಕ್ಷದ ಸದಸ್ಯತ್ವ ಅಭಿಯಾನದ ಅಂಗವಾಗಿ ನಂದಾವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಸುಮಾರು 55ಮಂದಿ ಪಕ್ಷದ ನಾಯಕರ ಸಮ್ಮುಖದಲ್ಲಿ ಎಸ್ಡಿಪಿಐ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಪಕ್ಷದ ಸದಸ್ಯತ್ವ ಪಡೆದರು.
ಎಸ್ಡಿಪಿಐ ರಾಜ್ಯ ಸಮಿತಿಯ ಕಾರ್ಯದರ್ಶಿಯಾದ ಅಶ್ರಫ್ ಮಚಾರ್ ಹೊಸ ಸದಸ್ಯರಿಗೆ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.
ಆಸೀಫ್ ನಂದಾವರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಯೂಸುಫ್ ಆಲಡ್ಕ, ಸಮಿತಿ ಸದಸ್ಯರಾದ ಫೈಝಲ್ ಮಂಚಿ, ಸಜಿಪ ನಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಸೀರ್ ಸಜಿಪ,
ಸಜಿಪ ಮುನ್ನೂರು ಗ್ರಾಮ ಸಮಿತಿ ಅಧ್ಯಕ್ಷ ಫಾರೂಕ್ ಅಲಾಡಿ ಹಾಗೂ ಮಲೀಕ್ ಕೊಳಕೆ, ಶಮೀರ್ ನಂದಾವರ, ಮಜೀದ್ ಅಲಾಡಿ ಉಪಸ್ಥಿತರಿದ್ದರು.
