ಅಶ್ಶಮಾಯಿಲ್ ಮುಹಮ್ಮದೀಯಾ ವಿಶೇಷ ತರಗತಿ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಣೆ

ಮಂಗಳೂರು(www.vknews.in): ಅಶ್ಶಮಾಯಿಲುಲ್ ಮುಹಮ್ಮದಿಯ್ಯ ಆರು ತಿಂಗಳ ವಿಶೇಷ ಕೋರ್ಸ್ ನಲ್ಲಿ ವಿಜೇತರಾದ ಪ್ರಥಮ ಬ್ಯಾಚ್ ಗೆ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮ ದಾರುಲ್ ಇರ್ಷಾದ್ ಎಜುಕೇಶನಲ್ ಸೆಂಟರ್ ಕೆ.ಜಿ.ಎನ್ ಮಿತ್ತೂರಿನಲ್ಲಿ ಭಾನುವಾರ ನಡೆಯಿತು.

ಉಡುಪಿ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್(ಮಾಣಿ ಉಸ್ತಾದ್) ಅವರು 39ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು. 17 ವಿದ್ಯಾರ್ಥಿಗಳಿಗೆ ಶಾಮಿಲಿ ಪದವಿ ಹಾಗೂ 23 ವಿದ್ಯಾರ್ಥಿನಿಯರಿಗೆ ಶಾಮಿಲ ಪದವಿಯೊಂದಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಇದೇ ವೇಳೆ ಈ ತರಗತಿಯಲ್ಲಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾದ ಪುರುಷರ ವಿಭಾಗದಲ್ಲಿ ಇಬ್ಬರಿಗೆ ಹಾಗೂ ಮಹಿಳೆಯರ ವಿಭಾಗದ ಇಬ್ಬರಿಗೆ ಮಾಣಿ ಉಸ್ತಾದ್ ಅವರು ಬಹುಮಾನ ನೀಡಿ ಹಾರೈಸಿದರು.

ಈ ವೇಳೆ ದಾರುಲ್ ಇರ್ಶಾದ್ ದಅವಾ ಕಾಲೇಜು ಪ್ರಾನ್ಸುಪಾಲ ಸಯ್ಯಿದ್ ಸ್ವಲಾಹುದ್ದೀನ್ ಅದನಿ ಹಾಗೂ ಅಶ್ಶಮಾಯಿಲ್ ಮುಹಮ್ಮದಿಯ್ಯ ವಿಶೇಷ ಕೋರ್ಸ್ ಅಧ್ಯಾಪಕ ಇಸ್ಮಾಈಲ್ ಸಅದಿ‌ ಮಾಚಾರ್ ಉಪಸ್ಥಿತರಿದ್ದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...