ಚೊಕ್ಕಬೆಟ್ಟುವಿನಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ 260ನೇ ಯಶಸ್ವಿ ರಕ್ತದಾನ ಶಿಬಿರ

ಮಂಗಳೂರು(www.vknews.in): ನವೆಂಬರ್ 22 ಭಾನುವಾರ 2020 :- ಜಾಕ್ ಇಲೆವೆನ್ ಚೊಕ್ಕಬೆಟ್ಟು ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಜಂಟಿ ಸಹಭಾಗಿತ್ವದಲ್ಲಿ ಸರ್ಕಾರಿ ವೆನ್ಲಾಕ್ ಆಸ್ಪತ್ರೆ ಮಂಗಳೂರಿನ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಸರ್ಕಾರಿ ಶಾಲೆ ಚೊಕ್ಕಬೆಟ್ಟುವಿನಲ್ಲಿ ನಡೆಯಿತು.

ಶಿಬಿರದ ಮುಂಚಿತವಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕರಾದ ಮೊಯ್ದೀನ್ ಬಾವ ವಹಿಸಿ ಮಾತನಾಡಿದ್ದರು. ಯಾವುದೇ ತರದ ಸಮಾಜ ಸೇವೆ ಮಾಡಿ ಮಾತ್ರ ಒಳ್ಳೆಯ ಉದೇಶದಿಂದ ಮಾಡಿ ಜಾತಿ ಧರ್ಮ ನೋಡದೆ ಕಷ್ಟದಲ್ಲಿರುವ ಜನರನ್ನು ಹುಡುಕಿ ಅವರ ಕಷ್ಟಗಳ ಜೊತೆ ನಿಲ್ಲಿ ಎಂದರು, ಕಾರ್ಯಕ್ರಮ ದುಅ ಮೂಲಕ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬರಾದ ಜನಾಬ್ ಅಝೀಝ್ ದಾರಿಮಿ ಅವರು ರಕ್ತಕ್ಕೆ ಪರ್ಯಾಯ ವಸ್ತುವೊಂದಿಲ್ಲ ರಕ್ತ ಜಾತಿ ಸಂಘರ್ಷಗಳ ನಡುವೆ ಬಹಳ ಅಂತರ ಕಾಯ್ದುಕೊಂಡು ಎಲ್ಲರನ್ನು ಒಟ್ಟು ಸೇರಿಸುವ ಮಹಾತ್ಕಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಂಶಾದ ಕಾರ್ಪೊರೇಟರ್ ಚೊಕ್ಕಬೆಟ್ಟು, ಅಶ್ರಫ್ ಕಾನ ಜುಮಾ ಮಸೀದಿ ಅದ್ಯಕ್ಷರು, ನೌಶಾದ್ ಎಸ್. ಡಿ. ಪಿ. ಐ ಚೂಕ್ಕಬೆಟ್ಟು, ಅಬೂಬಕ್ಕರ್ ಕುಳಾಯಿ, ಅಬ್ದುಲ್ ಜಲೀಲ್ ಚೂಕ್ಕಬೆಟ್ಟು,ಬ್ಲಡ್ ಡೋನರ್ಸ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ಕಾರ್ಯನಿರ್ವಾಹಕರಾದ. ಮನ್ಸೂರ್ ಕಲ್ಲಡ್ಕ, ಫಾರೂಖ್ ಜ್ಯೂಸ್ ರೊಮ್ಯಾಂಟಿಕ್, ಶಾಹಿದ್ ಸೂರಿಂಜೆ, ಇಮ್ತಿಯಾಜ್ ಜೋಕಟ್ಟೆ ,
ಜಾಕ್ ಇಲೆವೆನ್ ಚೊಕ್ಕಬೆಟ್ಟು ಇದರ ಕಾರ್ಯನಿರ್ವಾಹಕರಾದ. ಅರ್ಶಾದ್, ನಿಜಾಮ್, ಫರ್ಹಾನ್, ಶಾಹಿಲ್, ಪರ್ವೆಝ್, ಕಾಮಿಲ್, ಮುಝಮಿಲ್, ಶಾಹಿದ್, ಫಾಯಿಝ್, ಫೈಝ್, ಶೀಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿರೂಪಕರಾದ ಆಫ್ರಿದಿ ಪಾರಡೈಸ್ ಚೂಕ್ಕಬೆಟ್ಟು ನಿರೂಪಿಸಿದರು.

ಜಾಕ್ ಇಲೆವೆನ್ ಚೊಕ್ಕಬೆಟ್ಟು ಇದರ ಅರ್ಶಾದ್ ವಂದಿಸಿದರು.
ಒಟ್ಟು 85 ಮಂದಿ ಯುವಕರು ರಕ್ತದಾನ ಮಾಡಿ ಜೀವದಾನಿಗಳಾಗುವುದರೊಂದಿಗೆ ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...