ಮುಂಬೈ(ವಿಶ್ವ ಕನ್ನಡಿಗ ನ್ಯೂಸ್): ಉತ್ತರ ಪ್ರದೇಶ ಸರ್ಕಾರವು ಪಿ.ಎಫ್.ಐ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಸಂಬಂಧ ಪತ್ರಕರ್ತ ಸಿದ್ದೀಕ್ ಕಪ್ಪನ್ ಹಾಗು ಹಣಕಾಸಿನ ಸಂಬಂಧ ಭೀಮ್ ಆರ್ಮಿ ಮುಖ್ಯಸ್ಥರನ್ನು ಬಂಧಿಸಿದ್ದು,ಹಾಗಾದರೆ ಪಿ.ಎಫ್.ಐ ನಿಷೇಧಿತ ಸಂಘಟನೆಯೇ ಎಂದು ಸರ್ಕಾರದ ಅಧಿಕೃತ ಉತ್ತರಕ್ಕೆ ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಆರ್.ಟಿ.ಐ ಸಲ್ಲಿಸಿದ್ದಾರೆ.
ಒಂದು ವೇಳೆ ಪಿ.ಎಫ್.ಐ ನಿಷೇಧಿತ ಸಂಘಟನೆಯಲ್ಲದಿದ್ದಲ್ಲಿ ಇದು ಅಕ್ರಮ ಬೇಟೆ ಎಂದು ಬಣ್ಣಿಸಿದ್ದಾರೆ.ಸಾಕೇತ್ ಗೋಖಲೆ ಈಗಾಗಲೇ ಹಲವು ಪ್ರಕರಣಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬಯಲಿಗೆಳೆದಿದ್ದಾರೆ.