ದುಬೈ(www.vknews.in): ಈ ವರ್ಷದ ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ಯುಎಇ ಪ್ರಜೆಗಳನ್ನು ಪ್ರಾಯೋಜಕರಾಗಿ ಹೊಂದುವ ಅಗತ್ಯವನ್ನು ಯುಎಇ ಸರಕಾರವು ರದ್ದುಗೊಳಿಸಿದ್ದು, ವಲಸಿಗ ಹೂಡಿಕೆದಾರರಿಗೆ ಶೇಕಡಾ 100 ರಷ್ಟು ತಮ್ಮ ವ್ಯಾಪಾರದ ಮಾಲೀಕತ್ವವನ್ನು ಅನುಮತಿಸಿದೆ. ಈ ಕ್ರಮವು ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಫೆಡರಲ್ ಹೊರಡಿಸಿದ ಫೆಡರಲ್ ಕಾನೂನಿಗೆ ಅನುಗುಣವಾಗಿದೆ.
ಈ ಹೊಸ ಕಾನೂನು ಕಂಪನಿಗಳು ಮತ್ತು ಅವುಗಳ ಷೇರುದಾರರ ಮೇಲೆ 2015 ರ ಕಾನೂನು ಸಂಖ್ಯೆ 2 ಅನ್ನು ತಿದ್ದುಪಡಿ ಮಾಡಿ 2020ರ ಕ್ಯಾಬಿನೆಟ್ ರೆಸಲ್ಯೂಶನ್ ಸಂಖ್ಯೆ 16 ರ ಪ್ರಕಾರ ಯುಎಇಯಲ್ಲಿ ಪರವಾನಗಿ ಪಡೆದ ಮತ್ತು ನೋಂದಾಯಿಸಲ್ಪಟ್ಟ ಕಂಪನಿಗಳ ಬಹುನಿರೀಕ್ಷಿತ ಶೇಕಡಾ 100 ರಷ್ಟು ಮಾಲೀಕತ್ವವನ್ನು ವಿದೇಶಿ ಪ್ರಜೆಗಳಿಗೆ ಅನುಮತಿಸುತ್ತದೆ.ಈ ತಿದ್ದುಪಡಿಗಳು ಯುಎಇ ಪ್ರಜೆಗಳ ಕನಿಷ್ಠ ಶೇಕಡಾವಾರು ಮಾಲೀಕತ್ವದಿಂದ ವಲಸಿಗ ಹೂಡಿಕೆದಾರರಿಗೆ ವಿನಾಯಿತಿ ನೀಡುತ್ತವೆ.